ಮುಂಬೈ: ಕಿರುತೆರೆಯ ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಮುಂಬೈ ಆ.9 : ಭಾರತೀಯ ಚಿತ್ರರಂಗ ಹಾಗೂ ಕಿರುತೆರೆಯ ಹಿರಿಯ ನಟ ಅನುಪಮ್ ಶ್ಯಾಮ್ ಇಂದು ನಿಧನರಾಗಿದ್ದಾರೆ.
63 ವರ್ಷದ ಅನುಪಮ್ ಶ್ಯಾಮ್ ಅವರನ್ನು ಅನಾರೋಗ್ಯದ ಹಿನ್ನೆಲೆ 4 ದಿನಗಳ ಹಿಂದೆ ಗೋರೆಗಾಂವ್ ನ  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಕಿಡ್ನಿ ವೈಫಲ್ಯ ಸಮಸ್ಯೆ ಬಳಲುತ್ತಿದ್ದರು ಎಂದು ತಿಳಿದು ಬಂದಿದ್ದು,  ಇಂದು ಬೆಳಿಗ್ಗೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಇವರು ‘ಸತ್ಯ’, ‘ದಿಲ್ ಸೇ’, ‘ಲಗಾನ್’ ‘ಗೋಲ್‌ಮಾಲ್’, ‘ಮುನ್ನ ಮೈಕೇಲ್’, ‘ದಸ್ತಕ್’ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೀರಿಯಲ್ ಗಳಲ್ಲೂ ನಟಿಸಿರುವ ಅವರಿಗೆ ಮನ್ ಕೇ ಆವಾಜ್ ಪ್ರತಿಗ್ಯಾ’ ಸೀರಿಯಲ್‌ನಲ್ಲಿ ‘ಠಾಕುರ್ ಸಜ್ಜನ್ ಸಿಂಗ್’ ಪಾತ್ರ ಭಾರೀ ಜನಪ್ರಿಯತೆ ತಂದುಕೊಟ್ಟಿತ್ತು. 

Leave a Reply

Your email address will not be published. Required fields are marked *

error: Content is protected !!