ಮೋದಿ ಭೇಟಿ ನೀಡಿದ್ದು ಸೇನಾ ಆಸ್ಪತ್ರೆಗೆ, ಅದು ಫೋಟೊಶಾಪ್ ವಾರ್ಡ್ ಅಲ್ಲ

ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 3ರಂದು ಲಡಾಖ್‌ಗೆ ತೆರಳಿದ್ದಾಗ ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಜೂನ್‌ 15ರಂದು ಚೀನಾ ಪಡೆಗಳ ಜತೆಗಿನ ಸಂಘರ್ಷದಲ್ಲಿ ಗಾಯಗೊಂಡಿದ್ದ ಯೋಧರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ಅವರ ಆರೋಗ್ಯ ವಿಚಾರಿಸಿದ್ದರು. ಈ ವಿಚಾರ ಬಳಿಕ ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

‘ಮೋದಿಯವರು ಸೇನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಬಿಂಬಿಸಲು ಕಾನ್ಫರೆನ್ಸ್‌ ಹಾಲ್‌ ಅನ್ನು ವಾರ್ಡ್‌ ಆಗಿ ಪರಿವರ್ತಿಸಲಾಗಿದೆ’ ಎಂದು ಕಾಂಗ್ರೆಸ್ ಆರೋಪಿಸಿತ್ತು.

‘ಇದು ಹೇಗೆ ಆಸ್ಪತ್ರೆಯಂತೆ ಕಾಣಿಸಲು ಸಾಧ್ಯ? ಡ್ರಿಪ್‌ ಇಲ್ಲ, ವೈದ್ಯರು ಇರಬೇಕಾದ ಜಾಗದಲ್ಲಿ ಫೋಟೊಗ್ರಾಫರ್ ಇದ್ದಾರೆ, ಔಷಧವಿಲ್ಲ, ನೀರೂ ಇಲ್ಲ’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಅಭಿಷೇಕ್ ದತ್ ಟ್ವೀಟ್ ಮಾಡಿದ್ದರು. 

Leave a Reply

Your email address will not be published. Required fields are marked *

error: Content is protected !!