ಉಡುಪಿ: ಮತ್ತೆ ಕೊರೊನಾ ಆರ್ಭಟ, 45 ಪಾಸಿಟಿವ್, 518 ವರದಿ ನೆಗೆಟಿವ್
ಉಡುಪಿ: ಮುಂಬೈನಿಂದ ಅತೀ ಹೆಚ್ಚು ಜನರಿಂದ ಜಿಲ್ಲೆಗೆ ಬಂದ ಕೊರೊನಾ ಇಂದು, ಜಿಲ್ಲೆಯ ಜನರಿಗೂ ಹರಡಲು ಪ್ರಾರಂಭವಾಗಿದೆ. ಇಂದು ಜಿಲ್ಲೆಯಲ್ಲಿ 45 ಜನರಿಗೆ ಸೋಂಕು ದೃಢವಾಗಿದೆ.
ಸೋಂಕಿತರಲ್ಲಿ ಮಹಾರಾಷ್ಟ್ರದಿಂದ ಬಂದ 20, ಚಿತ್ರದುರ್ಗ ಪ್ರಯಾಣಿಸಿದ ಒಬ್ಬರು, ಬೆಂಗಳೂರಿಗೆ ಪ್ರಯಾಣಿಸಿದ ಇಬ್ಬರು ಹಾಗೂ ಪ್ರಾಥಮಿಕ ಸಂಪರ್ಕದಿಂದ 19 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಸ್ಥಳೀಯ 2 ಮಂದಿಗೆ ಸೋಂಕು ದೃಢಗೊಂಡಿದೆ.
ಈ ವರೆಗೆ ಒಟ್ಟು 1136 ರೋಗಿಗಳು ಬಿಡುಗಡೆ ಹೊಂದಿದ್ದು ಸದ್ಯ 183 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ಕೋಟ ಹೋಟೆಲ್ ಮಾಲೀಕನ ಪ್ರಥಮ ಸಂಪರ್ಕದಿಂದ 9 ಜನರಿಗೆ ಪಾಸಿಟಿವ್ ಬಂದಿದೆಂದು ಮಾಹಿತಿ ಹೊರ ಬಿದ್ದಿದು, ಅಧಿಕಾರಿಗಳು ಇನ್ನಷ್ಟೇ ಸ್ಪಷ್ಟಪಡಿಸಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಸೋಂಕಿನ ಸಂಖ್ಯೆಯ ಪ್ರಮಾಣ ಅಧಿಕವಾಗಿದೆ. ಪ್ರತಿನಿತ್ಯ ರಾಜ್ಯದ ಹೆಲ್ತ್ ಬುಲೆಟಿನ್ ಬೆಂಗಳೂರು ಹೊರತುಪಡಿಸಿದರೆ ಮಂಗಳೂರಿನಲ್ಲೇ ಹೆಚ್ಚಿನ ಪ್ರಕರಣಗಳನ್ನು ವರದಿ ಆಗುತ್ತಿವೆ. ಇನ್ನು ಇಂದು ಒಂದೇ ದಿನ 147 ಜನರಿಗೆ ಸೋಂಕು ಹಬ್ಬಿದ್ದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚು ಮಾಡಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 1,925 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು 37 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು ಹೊಸದಾಗಿ 1,235 ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 23,474ಕ್ಕೇ ಏರಿಕೆಯಾಗಿದೆ.
ಇಂದು 37 ಮಂದಿ ಕೊರೋನಾಗೆ ಬಲಿಯಾಗಿದ್ದು ರಾಜ್ಯದಲ್ಲಿ ಇದುವರೆಗೂ 373 ಮಂದಿ ಬಲಿಯಾಗಿದ್ದಾರೆ.
ಒಟ್ಟಾರೆ 23,474 ಪ್ರಕರಣಗಳ ಪೈಕಿ 9,847 ಮಂದಿ ಡಿಸ್ಚಾರ್ಜ್ ಆಗಿದ್ದು 13,251 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ