ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿರುವ ಮಕ್ಕಳಿಗಾಗಿ ರಕ್ಷಣಾ ಕಾರ್ಯಾಚರಣೆ
ಮಂಗಳೂರು: ಮಂಗಳೂರಿನ ಹೊರವಲಯದಲ್ಲಿರುವ ಗುರುಪುರದ ಬಂಗ್ಲೆಗುಡ್ಡ ಕುಸಿದು ಹಲವು ಮನೆಗಳು ನೆಲಸಮಕೊಂಡಿವೆ. ಇನ್ನು ಮಣ್ಣಿನಡಿಯಲ್ಲಿ ಮಕ್ಕಳಿಬ್ಬರೂ ಸಿಕ್ಕಿ ಹಾಕಿಕೊಂಡಿದ್ದು ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ಪೊಲೀಸರು ಮತ್ತು ಸ್ಥಳೀಯರು ನಿರತರಾಗಿದ್ದಾರೆ.
ಬಂಗ್ಲೆಗುಡ್ಡ ಕುಸಿತದಿಂದಾಗಿ ನಾಲ್ಕು ಮನೆಗಳು ನೆಲಸಮಗೊಂಡಿದ್ದು ಕೂಡಲೇ ಪೊಲೀಸರು ಮತ್ತು ಸ್ಥಳೀಯರು ಮನೆಯಲ್ಲಿದ್ದ ಹಲವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮನೆಯಿಂದ ಹೊರಬರುವ ವೇಳೆ ಮಕ್ಕಳನ್ನು ಪೋಷಕರು ಬಿಟ್ಟು ಬಂದಿದ್ದರಿಂದ ಮಕ್ಕಳಿಬ್ಬರು ನೆಲದಡಿ ಸಿಲುಕಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ 30 ಅಡಿ ಕೆಳಕ್ಕೆ ಗುಡ್ಡ ಕುಸಿದಿದೆ. ಕೂಡಲೇ ಪೊಲೀಸರು ಕರ್ಯಾಚರಣೆಗೆ ಮುಂದಾಗಿದ್ದರು.
ಜೆಸಿಬಿ ಮೂಲಕ ಮಣ್ಣನ್ನು ಹೊರತೆಗೆಯಲಾಗುತ್ತಿದೆ. ಇನ್ನು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದು ಪೊಲೀಸರಿಗೆ ನೆರವಾಗುತ್ತಿದ್ದಾರೆ.