ಉಡುಪಿ: ಯುವವಾಹಿನಿ ಘಟಕದ “ತಲೆಗೊಂದು ಸೂರು” ಮನೆ ಹಸ್ತಾಂತರ
ಉಡುಪಿ: ಯುವವಾಹಿನಿ ಘಟಕದ “ತಲೆಗೊಂದು ಸೂರು ” ಕಾರ್ಯಕ್ರಮದಡಿಯಲ್ಲಿ ಉದ್ಯಾವರದ ಮಹಿಳೆ ಸಿಂಧು ಪೂಜಾರ್ತಿಯವರಿಗೆ ನಿರ್ಮಿಸಿ ಕೊಟ್ಟಿರುವ ಮನೆಯನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ನಾರಾಯಣ ಬಿ. ಎಸ್, ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು, ಕಾರ್ಯದರ್ಶಿ ಮಹಾಬಲ ಅಮೀನ್, ಪಂಚಾಯತ್ ಅಧ್ಯಕ್ಷರಾದ ಸುಗಂಧಿ ಶೇಖರ್, ಯುವವಾಹಿನಿಯ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಾಜಿ ತಾಲುಕು ಪಂಚಾಯತ್ ಸದಸ್ಯರಾದ ಗಿರೀಶ್ ಕುಮಾರ್ ಅವರ ಸಹಕಾರದಲ್ಲಿ, ಯುವವಾಹಿನಿ ಸದಸ್ಯರು ಹಾಗೂ ಸ್ಥಳೀಯ ದಾನಿಗಳ ನೆರವಿನೊಂದಿಗೆ ಸಾಕಾರಗೊಂಡ ಈ ನಿರ್ಮಾಣದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಕೇಂದ್ರ ಸಮಿತಿಯ ಅಧ್ಯಕ್ಷರು ತಿಳಿದರು.
ಅಧ್ಯಕ್ಷರು ಮಾತನಾಡಿ ನನ್ನ ಕಾರ್ಯಾವದಿಯಲ್ಲಿ ಸಮಾಜಕ್ಕೆ ಉಪಯುಕ್ತವಾದ ಗೃಹ ನಿರ್ಮಾಣ ಕೆಲಸ ರಘುನಾಥ್ ಮಾಬಿಯನ್ ರವರ ಮುತುವರ್ಜಿಯಲ್ಲಿ ನಡೆಸಿದ್ದು ಸಹಕರಿಸಿದ ಎಲ್ಲರಿಗೂ ಅಭಿನಂದಸಿದರು. ಹಿರಿಯರಾದ ಬನ್ನಂಜೆ ಬಾಬು ಅಮೀನ್ ಗುರು ಪ್ರಾರ್ಥನೆ ನಡೆಸಿ ಶುಭ ಹಾರೈಸಿದರು.ಭಾಸ್ಕರ್ ಸುವರ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಿಂಧು ಪೂಜಾರ್ತಿ ಕುಟುಂಬದವರಿಗೆ ಶುಭಕೋರಿದರು.ಯುವವಾಹಿನಿ ಉಡುಪಿ ಘಟಕದ ಸಲಹೆಗಾರರಾದ ಸಂತೋಷ್ ಕುಮಾರ್,ರಮೇಶ್ ಕೋಟ್ಯಾನ್,ಉಪಾಧ್ಯಕ್ಷರಾದ ಜಗದೀಶ್ ಕುಮಾರ್, ಮಾಜಿ ಅಧ್ಯಕ್ಷ ರಾದ ಶೇಖರ್ ಕೋಟಿಯನ್, ರಮೇಶ್ ಕುಮಾರ್, ಚಿದಾನಂದ, ದಯಾನಂದ , ಶಂಕರ ಪೂಜಾರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ವಾಮನ ಬಂಗೇರ,ಮಹಿಳಾ ಸಂಚಾಲಕಿ ಶಕುಂತಲ ಸುಕೇಶ್, . ಭಾರತಿ ಭಾಸ್ಕರ್, ಉದ್ಯಾವರ ಬಿಲ್ಲವ ಸಂಘದ ಅಧ್ಯಕ್ಷರಾದ. ಲ.ಪ್ರತಾಪ್ ಕುಮಾರ್ ಇವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸಹಕಾರ ವಿತ್ತ ಗಿರೀಶ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.ಕೊನೆಯಲ್ಲಿ ಕಾರ್ಯದರ್ಶಿ ಮಹಾಬಲ ಅಮೀನ್ ಧನ್ಯವಾದ ನೀಡುತ್ತಾ ಯುವವಾಹಿನಿಯ ಸಮಾಜ ಮುಖಿ ಜನಪರ ಕಾಳಜಿಯ ಈ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರು, ಸ್ಥಳೀಯರು ಗಣ್ಯರು ಆಗಮಿಸಿ ಈ ಸಂತೋಷದ ಕ್ಷಣದಲ್ಲಿ ಭಾಗಿದಾರರಾಗಿರುವದಕ್ಕೆ ವಂದನಾರ್ಪಣೆಗಳನ್ನು ಸಲ್ಲಿಸಿದರು.
Good luck for Yuva vaahini project of build a residential home to Sindhu poojarthi, Udyavara.
ತುಂಬಾ ಸಂತೋಷ