ನವದೆಹಲಿ ಆ.3: ಡಿಜಿಟಲೀಕರಣದಿಂದ ಬಹುತೇಕ ಎಲ್ಲಾ ಕಡೆ ಆನ್ಲೈನ್ ಪಾವತಿ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಅನೇಕ ಸಮಯದಲ್ಲಿ ಆನ್ಲೈನ್ ಪಾತಿಗೆ ನೆಟ್ವರ್ಕ್ ಅಡ್ಡಿಯಾಗುವುದನ್ನು ನಾವು ಗಮನಿಸಿದ್ದೇವೆ. ಅನೇಕರಿಗೆ ಈ ಪರಿಸ್ಥಿತಿಯ ಅನುಭವವಾಗಿರುತ್ತದೆ. ಆದರೀಗ ಈ ಸಮಸ್ಯೆಗೂ ಬ್ರೇಕ್ ಬಿದ್ದಿದೆ. ದೇಶದಲ್ಲಿ ಇ-ರುಪೀ ಎಂಬ ನೂತನ ವ್ಯವಸ್ಥೆ ಜಾರಿಗೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ನೂತನ ಡಿಜಿಟಲ್ ಪಾವತಿಗೆ ಚಾಲನೆ ನೀಡಿದ್ದಾರೆ.
ನೆಟ್ ಇಲ್ಲದೇ ಮೊಬೈಲಿನಿಂದ ಹಣ ಪಾವತಿಸಿವುದೇ ಈ ಇ-ರುಪೀ ಯ ವೈಶಿಷ್ಟ್ಯ. ಹಣಕಾಸು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಡಿಜಿಟಲ್ ಪಾವತಿಯನ್ನು ಸರಳಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಹೊಸ ಡಿಜಿಟಲ್ ಪಾವತಿ ವ್ಯವಸ್ಥೆ ಇದಾಗಿದೆ. ಇದು ನಗದು ರಹಿತವಾಗಿ, ಇಂಟರ್ನೆಟ್ ಸಂಪರ್ಕವಿಲ್ಲದೆ, ಕ್ಯೂಆರ್ ಕೋಡ್ ಅಥವಾ ಎಸ್ಎಂಎಸ್ ಆಧಾರಿತ ಇ-ವೋಚರ್ ನ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ.
ಇನ್ನು ಕಾರ್ಡ್, ಡಿಜಿಟಲ್ ಪಾವತಿ ತಂತ್ರಾಂಶ ಅಥವಾ ಇಂಟರ್ನೆಟ್ ಬ್ಯಾಕಿಂಗ್ ಬಳಸದೇ ಇ-ರುಪೀ ಯಲ್ಲಿ ಸಂದೇಶದ ಮೂಲಕ ವೋಚರ್ ಬಳಸಬಹುದಾಗಿದೆ. ಇದರಲ್ಲಿ ಯಾರು ಇ-ರುಪೀ ಫಲಾನುಭವಿಗಳಿರುತ್ತಾರೋ ಅವರ ಮೊಬೈಲ್ಗೆ ಸಂದೇಶದ ಮೂಲಕ ಹಣ ಕಳುಹಿಸಬಹುದಾಗಿದೆ.
| | |