ಉಡುಪಿ: 1547 ಮಂದಿ ಕ್ವಾರಂಟೈನ್ ಉಲ್ಲಂಘನೆ, ಕೂಡಲೇ ಪ್ರಕರಣ ದಾಖಲಿಸಿ

ಉಡುಪಿ ಜುಲೈ 4: ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್ ಉಲ್ಲಂಘಿಸಿರುವವರ ವಿರುದ್ದ ಕೂಡಲೇ ಪ್ರಕರಣ ದಾಖಲಿಸಿ, ವರದಿ ನೀಡುವಂತೆ ಜಿಲ್ಲೆ ಎಲ್ಲಾ ತಹಸೀಲ್ದಾರ್ ಗಳಿಗೆ ಮತ್ತು ಹೋಂ ಕ್ವಾರಂಟೈನ್ ಉಲ್ಲಂಘನೆ ಕುರಿತು ಪರಿಶೀಲನೆಗೆ ನಿಯೋಜಿಸಿರುವ ಫ್ಲೈಯಿಂಗ್ ಸ್ಕ್ವಾಡ್ ನ ಅಧಿಕಾರಿಗಳಿಗೆ ಜಿಲ್ಲಾಧಿಕರಿ ಜಿ.ಜಗದೀಶ್
ಸೂಚಿಸಿದ್ದಾರೆ.


ಅವರು ಶನಿವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಇದುವರೆಗೆ 1547 ಮಂದಿ ಮಂದಿ ಹೋಂ ಕ್ವಾರಂಟೈನ್ ಉಲ್ಲಂಘಿಸಿದ್ದು, ಅದರಲ್ಲಿ 1236 ಮಂದಿಗೆ ಎಚ್ಚರಿಕೆ ನೀಡಿದ್ದು, 8 ಮಂದಿಯ ವಿರುದ್ದ ಮಾತ್ರ ಪ್ರಕರಣ ದಾಖಲಿಸಲಾಗಿದೆ, ಹಲವು ಮಂದಿ ಒಂದು ಬಾರಿಗಿಂತಲೂ ಹೆಚ್ಚಿನ ಬಾರಿ ನಿಯಮ ಉಲ್ಲಂಘಿಸಿದ್ದು, ಅಂತಹವರ ವಿರುದ್ದ ಇದುವರೆಗೂ ಪ್ರಕರಣ ದಾಖಲಿಸದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಿಯಮ ಉಲ್ಲಂಘಿಸಿರುವವರ ವಿರುದ್ದ ಕೂಡಲೇ ಪ್ರಕರಣ
ದಾಖಲಿಸಿ ವರದಿ ನೀಡುಬೇಕು, ಇಲ್ಲವಾದಲ್ಲಿ ಸಂಬ0ದಪಟ್ಟ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.


ಹೋಂ ಕ್ವಾರಂಟೈನ್ ಉಲ್ಲಂಘನೆ ಪ್ರಕರಣಗಳು ಮತ್ತು ಪ್ರಕರಣ ದಾಖಲಿಸಿರುವ ಕುರಿತು ಪ್ರತಿದಿನದ ಮಾಹಿತಿಯನ್ನು ತಮಗೆ ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಮಹಾರಾಷ್ಟçದಿಂದ ಬಂದವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸುವ ಕುರಿತ ಆದೇಶವನ್ನು ರಾಜ್ಯ ಸರ್ಕಾರದಿಂದ ಕೇಳಿ ಪಡೆದಿದ್ದು,
ಅದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಮತ್ತು ಉಲ್ಲಂಘಿಸುವವರ ವಿರುದ್ದ ಪ್ರಕರಣ ದಾಖಲಿಸುವುದು ಎಲ್ಲಾ ಅಧಿಕಾರಿಗಳ ಕರ್ತವ್ಯವಾಗಿದ್ದು, ಈ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷತನ ಸಲ್ಲದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.


ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಪೂರಕ ವಾತಾವರಣವಿದ್ದು, ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಸಮರ್ಪಕ ಅನುಷ್ಠಾನ ಮಾಡುವುದು ಮಾತ್ರ ಅಗತ್ಯವಿದೆ, ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಪಾಲನೆ ಅತ್ಯಂತ ಪ್ರಮುಖವಾಗಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅನೇಕ ಸನ್ಮಾನ ಕಾರ್ಯಕ್ರಮಗಳು ,
ಸಮಾರಂಭಗಳು ನಡೆಯುತ್ತಿದ್ದು, ಇಂತಹವರ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಬಸ್ ಗಳಲ್ಲಿ ಸಾಮಾಜಿಕ ಅಂತರ ಇಲ್ಲದೇ ಇದ್ದು ಈ ಬಗ್ಗೆ ತಹಸೀಲ್ದಾರ್ ಗಳು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ವರದಿ ನೀಡುವಂತೆ ಸೂಚಿಸಿದರು.


ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಪೂರಕ ವಾತಾವರಣವಿದ್ದು, ಜಿಲ್ಲೆಯ ಜನರು ಬುದ್ದಿವಂತರು ಹಾಗೂ ಕಾನೂನು ಪಾಲನೆಗೆ ಹೆಸರುವಾಸಿಯಾಗಿರುವದುರ ಜೊತೆಗೆ ಮನೆಗಳು ದೂರ ದೂರ ಇರುವುದರಿಂದ ಸಾಮಾಜಿಕ ಅಂತರ ಪಾಲನೆ ಸುಲಭವಾಗಿದ್ದು, ಸ್ಲಮ್ ಗಳು ಇಲ್ಲದೇ ಇದ್ದು , ಅಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ
ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್ ಹಾಗೂ ಎಲ್ಲಾ ತಹಸೀಲ್ದಾರ್ ಗಳು ಹಾಗೂ ಪ್ಲೆöÊಯಿಂಗ್ ಸ್ಕಾ÷್ವಡ್‌ನ ಅಧಿಕಾರಿಗಳು ಉಪಸ್ಥಿತರಿದ್ದರು.

1 thought on “ಉಡುಪಿ: 1547 ಮಂದಿ ಕ್ವಾರಂಟೈನ್ ಉಲ್ಲಂಘನೆ, ಕೂಡಲೇ ಪ್ರಕರಣ ದಾಖಲಿಸಿ

  1. Home quarantine should be strictly practiced by the concerned people for the prevention of the Covid 19, spreading day by day. Government rules regarding this should be strictly followed for the betterment of all.

Leave a Reply

Your email address will not be published. Required fields are marked *

error: Content is protected !!