ಉಡುಪಿ: ನಗರಸಭಾ ಸದಸ್ಯ, ಮಾಜಿ ಸದಸ್ಯನ ಪುತ್ರ, ಸಹಿತ 19 ಮಂದಿಗೆ ಕೊರೊನಾ ಪಾಸಿಟಿವ್
ಉಡುಪಿ: (ಉಡುಪಿ ಟೈಮ್ಸ್ ವರದಿ)ಜಿಲ್ಲೆಯಲ್ಲಿ ಕೊರೊನಾ ಸೋಂಕು ಮುಂದುವರೆದಿದ್ದು, ಇಂದು ಜಿಲ್ಲೆಯ 19 ಜನರಿಗೆ ಕೊರೊನಾ ಸೋಂಕು ದೃಡಪಟ್ಟಿದೆ .ಅದರಲ್ಲಿ ಮುಖ್ಯವಾಗಿ ನಗರಸಭೆಯ ಸದಸ್ಯರೋರ್ವರಿಗೆ ಹಾಗೂ ಮಾಜಿ ನಗರಸಭೆಯ ಸದಸ್ಯರ ಪುತ್ರನಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢವಾಗಿದೆ.
ಮಾತ್ರವಲ್ಲದೆ ಆದಿಉಡುಪಿಯ ಹೆಸರಾಂತ ಮೀನು ಖಾದ್ಯ ಹೋಟೆಲಿನ ಮಾಲಕರಿಗೆ ಸೋಂಕು ತಟ್ಟಿದ್ದು ಉಡುಪಿ ಜನತೆಯಲ್ಲಿ ಆತಂಕ ಮನೆಮಾಡಿದೆ. ಈಗಾಗಲೇ ಜಿಲ್ಲೆಯ 25ಕ್ಕೂ ಹೆಚ್ಚು ಸ್ಥಳೀಯ ಜನರಿಗೆ ಸೋಂಕು ತಗಲಿದ್ದು, ಇದು ಇದೇ ರೀತಿ ಮುಂದುವರಿದಿರುವುದನ್ನು ಕಾಣುವಾಗ ಸೋಂಕು ಸಮುದಾಯ ಹಂತಕ್ಕೆ ಹರಡಿರುವಂತೆ ಕಾಣುತ್ತಿದೆ. ಆದರೂ ಜಿಲ್ಲಾಡಳಿತ ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ಜನರನ್ನು ಗೊಂದಲದಲ್ಲಿರುವಂತೆ ಮಾಡಿದೆಂದು ಜನರ ಆರೋಪವಾಗಿದೆ.
Lockdown again