ಉಡುಪಿ: ಇನ್ನೊಂದು ಹೋಟೆಲ್ ಸಿಲ್ ಡೌನ್!, ಮಾಲಕನಿಗೆ ಕೊರೊನಾ ಪಾಸಿಟಿವ್,

ಉಡುಪಿ: (ಉಡುಪಿಟೈಮ್ಸ್ ವರದಿ) ಕಳೆದ ನಾಲ್ಕು ದಿನಗಳಿಂದ ಆದಿವುಡುಪಿಯ ಹೆಸರಾಂತ ಮಾಂಸಹಾರಿ ಮೀನು ಊಟದ ಹೋಟೆಲ್ ಸಿಬಂದಿಗಳಿಗೆ ಕೊರೊನಾ ಸೋಂಕು ಹರಡಿತ್ತು ಎಂಬ ವದಂತಿಯಿತ್ತು. ಆದರೆ ಇಂದು ಅದರ ಮಾಲಕರಿಗೆನೇ ಕೊರೊನಾ ಸೋಂಕಿನ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಹೋಟೆಲ್‌ನ್ನು ಸಂಪೂರ್ಣ ಸಿಲ್ ಡೌನ್ ಮಾಡಲಾಗಿದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಕರಾವಳಿ ಬೈಪಾಸ್ ಬಳಿಯ ಹೆಸರಾಂತ ಮೀನು ಖಾದ್ಯದ ಹೋಟೆಲ್ ನ ಸಿಬಂದಿಗೆ ಕೊರೊನಾ ಸೋಂಕು ಹರಡಿದ ವದಂತಿ ಹಿನ್ನೆಲೆ ನಿನ್ನೆ “ಉಡುಪಿ ಟೈಮ್ಸ್” ಅವರ ಮಾಲಕರಲ್ಲಿ ಈ ಬಗ್ಗೆ ಮಾತನಾಡಿಸಿದಾಗ ಇದೊಂದು ಸುಳ್ಳು ವದಂತಿ ಎಂದಿದ್ದರು. ಆದರೆ ಇಂದು ಅದರ ಮಾಲಕರೀಗೆನೇ ಸೋಂಕು ಹರಡಿದ ಹಿನ್ನೆಲೆಯಲ್ಲಿ ಹೋಟೆಲ್ ಸಿಲ್ ಡೌನ್ ಮಾಡಿ, ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.


ಹೋಟೆಲ್ ಗೆ ದಿನ ನಿತ್ಯ ನೂರಾರು ಗ್ರಾಹಕರು ಬರುವ ಕಾರಣ ಸೋಂಕು ಹರಡಿರುವ ಸಾಧ್ಯತೆ ಇರಬಹುದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!