ಕಾಪು: ವಿದೇಶದಿಂದ ಬಂದು ಕೆಲಸವಿಲ್ಲದ ಚಿಂತೆ- ವ್ಯಕ್ತಿ ಆತ್ಮಹತ್ಯೆ

ಕಾಪು ಜು.29 (ಉಡುಪಿ ಟೈಮ್ಸ್ ವರದಿ): ನೇಣು ಬಿಗಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕಾಪುವಿನಲ್ಲಿ ನಡೆದಿದೆ. ಚಂದ್ರಶೇಖರ (51) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ 5 ವರ್ಷಗಳ ಹಿಂದೆ ವಿದೇಶದಿಂದ ಊರಿಗೆ ಬಂದು ಕೆಲಸವಿಲ್ಲದ ಮನೆಯಲ್ಲಿದ್ದರು. ಅಲ್ಲದೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ವನ್ನೂ ಹೊಂದಿದ್ದರು. ಇವರು ಯಾವುದೋ ವಿಚಾರಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!