ಮಣಿಪಾಲ: ಮಹಿಳೆಗೆ 3.5 ಲಕ್ಷ ರೂ. ವಂಚನೆ

ಮಣಿಪಾಲ ಜು.29(ಉಡುಪಿ ಟೈಮ್ಸ್ ವರದಿ): ಪರಿಚಿತನೇ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಈ ಬಗ್ಗೆ ವಂಚನೆಗೆ ಒಳಗಾದ ತಬುಸ್ಸುಮ್ (28) ಎಂಬವರು ಮೊಹಮ್ಮದ್ ರಪೀಕ್(45) ಎಂಬಾತನ ವಿರುದ್ಧ ದೂರು ನೀಡಿದ್ದಾರೆ. ಅದರಂತೆ ಇವರು ಮಣಿಪಾಲದಲ್ಲಿ ಹೀನಾ ಎಂಟರ್ ಪ್ರೈಸಸ್ ನ್ನು ನಡೆಸಿಕೊಂಡು ಬಂದಿದ್ದು, ಇವರ ಜೊತೆಯಲ್ಲಿ ಮೊಹಮ್ಮದ್ ರಪೀಕ್ ಎಂಬಾತ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ತಬುಸ್ಸುಮ್ ಅವರ ಮನೆಯಲ್ಲಿಯೇ ವಾಸವಾಗಿದ್ದ.‌

ಈ ನಡುವೆ ತಬುಸ್ಸುಮ್ ಅವರೊಂದಿಗೆ ಸಲುಗೆ ಬೆಳೆದಿಕೊಂಡಿದ್ದ ಮೊಹಮ್ಮದ್ ರಪೀಕ್ ನ್ನನ್ನು ನಂಬುವಂತೆ ಮಾಡಿ ವಾಪಾಸ್ಸು ನೀಡುವುದಾಗಿ ಹೇಳಿ 3,50,000 ರೂ. ಹಣ ಪಡೆದಿದ್ದ. ಆದರೆ ಬಳಿಕ ಹಣ ನೀಡದೇ ಇದ್ದಾಗ ತಬುಸ್ಸುಮ್ ಅವರು ಮೊಹಮ್ಮದ್ ರಪೀಕ್ ಬಳಿ  ಹಣ ಕೇಳಿದ್ದಾರೆ. ಈ ಸಲುವಾಗಿ ಜು.4 ರಂದು ತಬುಸ್ಸುಮ್ ಅವರಿದ್ದ ಮಣಿಪಾಲದ ಫ್ಲಾಟ್ ಗೆ ಬಂದ ಮೊಹಮ್ಮದ್ ರಪೀಕ್ ಹಣ ಕೊಡಲು ನನಗೆ ಆಗುವುದಿಲ್ಲ, ನೀನು ಏನೂ ಬೇಕಾದರೂ ಮಾಡಿಕೋ, ನಿನ್ನಿಂದ ಹಣ ವಸೂಲಿ ಮಾಡಲು ನಿನಗೆ ಸಾದ್ಯವಿಲ್ಲ ಎಂದು ಹೇಳಿ ಅವ್ಯಾಚ್ಚ ಶಬ್ದಗಳಿಂದ ಅಶ್ಲೀಲವಾಗಿ ಬೈದು ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ  ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!