ಆನ್‌ಲೈನ್, ಆಫ್‌ಲೈನ್‌ನಲ್ಲಿ ಕಿರುಚಿತ್ರ ಸ್ಪರ್ಧೆ

ಮಂಗಳೂರು, ಜು.27: ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಆರು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಕುಶಿಯೋನ್ ಕಾ ಆಶಿಯನಾ – ವಿಷಯಾಧಾರಿತ ಕಿರುಚಿತ್ರ ಸ್ಪರ್ಧೆಗಾಗಿ ಆಫ್‌ಲೈನ್ ಅಥವಾ ಆನ್‌ಲೈನ್ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.

ಫಲಾನುಭವಿಗಳ ಜೀವನದಲ್ಲಿ ತಂದ ಬದಲಾವಣೆಗಳು ಎಂಬ ವಿ?ಯದ ಮೇಲೆ ಕಿರುಚಿತ್ರ ಸ್ಪರ್ಧೆಯಲ್ಲಿ ಫಲಾನುಭವಿಗಳು, ವಿದ್ಯಾರ್ಥಿಗಳು, ಯುವಕರು, ಸಂಘ ಸಂಸ್ಥೆಗಳು ಭಾಗವಹಿಸಬಹುದು. ಅಂತರ್ಜಾಲ ತಾಣ https://pmay-urban.gov.in ನಲ್ಲಿ ನೋಂದಾಯಿಸಿಕೊಂಡು ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ PMAY(U) Dಆಪ್ಲಿಕೇಶನ್‌ನಲ್ಲಿ ಚಿತ್ರೀಕರಿಸಿದ ಕಿರುಚಿತ್ರವನ್ನು ೨೦೨೧ ರ ಸೆಪ್ಟೆಂಬರ್ ೧೦ ರೊಳಗೆ ಅಪ್ಲೋಡ್ ಮಾಡಬಹುದು.

ಕೇಂದ್ರ ಸರ್ಕಾರವು ಸ್ಪರ್ಧೆಯ ಫಲಿತಾಂಶವನ್ನು 2021ರ ಸೆಪ್ಟೆಂಬರ್ 30 ರಂದು ಘೋಷಿಸಲಿದೆ. ವಿಜೇತರಿಗೆ ಪ್ರಥಮ ಬಹುಮಾನ (ಎಲ್ಲಾ ರಾಜ್ಯದಿಂದ 25 ಜನರಿಗೆ) 25,000 ರೂ.ಗಳು, ದ್ವಿತೀಯ ಬಹುಮಾನ (ಎಲ್ಲಾ ರಾಜ್ಯದಿಂದ 25 ಜನರಿಗೆ) 20,000 ರೂ.ಗಳು, ಹಾಗೂ ತೃತೀಯ ಬಹುಮಾನ (ಎಲ್ಲಾ ರಾಜ್ಯದಿಂದ 25 ಜನರಿಗೆ) 12,500 ರೂ.ಗಳು ನಗದನ್ನು ಬಹುಮಾನವಾಗಿ ನೀಡಲಾಗುತ್ತದೆ

ಹೆಚ್ಚಿನ ಮಾಹಿತಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶ ಕಚೇರಿಯ ಸಿ.ಎಲ್.ಟಿ.ಸಿ ತಜ್ಞರು ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಪರ್ಕಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!