ಕಳೆದ ವರ್ಷದ ಮಳೆ ಹಾನಿ: ಕೇಂದ್ರದಿದ ರಾಜ್ಯಕ್ಕೆ 629 ಕೋಟಿ ರೂ. ಪರಿಹಾರ ಬಿಡುಗಡೆ- ಶೋಭಾ ಕರಂದ್ಲಾಜೆ
ಉಡುಪಿ ಜುಲೈ 27: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕಳೆದ ವರ್ಷದಲ್ಲಿ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ 629.03 ಕೋಟಿ ರೂ. ಹಾಗೂ ಮಹಾರಾಷ್ಟ್ರಕ್ಕೆ 701.00 ಕೋಟಿ ರೂ. ನೆರವಿನ ಅನುಮೋದನೆಯನ್ನು ಎಸ್.ಡಿ.ಆರ್.ಎಫ್ ಮಾನದಂಡಗಳ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಲೋಕಸಭೆಯಲ್ಲಿ ನಡೆದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಅನಾವೃಷ್ಟಿ ಕಾರಣದಿಂದ 2020 ನೇ ಸಾಲಿನಲ್ಲಿ ರಾಜಸ್ಥಾನದಲ್ಲಿನ ಕೃಷಿ ಸಮುದಾಯಕ್ಕೆ ಅಪಾರ ಬೆಳೆ ನಷ್ಟ ಉಂಟಾಗಿದ್ದು,
ಕೇಂದ್ರ ಸರಕಾರ ಈ ಬೆಳೆ ನಷ್ಟಕ್ಕೆ ನೆರವಿನ ರೂಪದಲ್ಲಿ 113.69 ಕೋಟಿ ರೂ. ಗಳನ್ನು ಎಸ್.ಡಿ.ಆರ್.ಎಫ್ ಮಾನದಂಡಗಳ
ಅಡಿಯಲ್ಲಿ ಅನುಮೋದನೆ ನೀಡಿದೆ.
2020-21 ನೇ ವರ್ಷದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಒಟ್ಟು 67.96 ಲಕ್ಷ ಹೆಕ್ಟೇರ್ ಕೃಷಿಭೂಮಿ ಯನ್ನು ಮಹಾರಾಷ್ಟ್ರ ರಾಜ್ಯದಲ್ಲಿ ವಿಮೆಗೆ ಒಳಪಡಿಸಲಾಗಿತ್ತು. ಈ ಸಾಲಿನ ಖಾರಿಫ್ ಮತ್ತು ರಬಿಯಲ್ಲಾದ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರ ಒಟ್ಟು 750.12 ಕೋಟಿ ರೂ.ಬಿಡುಗಡೆ ಮಾಡಿದ್ದು, 11.43 ಲಕ್ಷ ರೈತರು ಇದರ ಫಲಾನುಭವವನ್ನು ಪಡೆದಿರುವುದಾಗಿ ಸಚಿವೆ ತಿಳಿಸಿರುತ್ತಾರೆ.