ವಂಡ್ಸೆ: ಪಂಚಾಯತ್ ಕಟ್ಟಡದಲ್ಲಿ ಕಸದ ರಾಶಿ

ವಂಡ್ಸೆ: ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಕಸದ ರಾಶಿ ತುಂಬಿ ತುಳುಕುತ್ತಿದೆ. ಈ ಗ್ರಾಮಕ್ಕೆ ಈ ಹಿಂದೆ ಕೆಲವು ಕಡೆಗಳಿಂದ ವಿದೇಶಗಳಿಂದ ಭೇಟಿ ನೀಡಿರುತ್ತಾರೆ

ರಾಜ್ಯದ ಹೆಸರಾಂತ ಪಂಚಾಯತ್ ವಂಡ್ಸೆ ಹೆಸರು ಇದ್ದರೂ ಕೂಡಾ ಈಗ ಈ ಕಸದ ರಾಶಿಯಿಂದ ವಂಡ್ಸೆ ಗ್ರಾಮದ ಕಸ ವಿಲೆವಾರಿ ಘಟಕ ಹೆಸರು ಕಳೆದುಕೊಂಡಿದೆ.

ಕೆಲವು ಕಡೆಗಳಲ್ಲಿ ಎಸ್.ಎಲ್.ಆರ್.ಎಮ್. ಘಟಕದ ಬಕೆಟು ಇರುವುದಿಲ್ಲ. ಕೆಲವು ಕಡೆ ಅಂಗಡಿಗಳಿಗೆ ಲೈಸೆನ್ಸ್ ಇರುದಿಲ್ಲ. ಕೆಲವರು ಲೈಸೆನ್ಸ್ ಮಾಡದಿದ್ದರೆ ಪಂಚಾಯತ ನೋಟಿಸು ಹಾಕುತ್ತಾರೆ. ಒಂದು ತರಹ ರಾಜಕೀಯ ಸೃಷ್ಟಿ ಆಗಿರುತ್ತದೆ. ಪಂಚಾಯತಗಳಿಗೆ ಸ್ಥಳೀಯರು ಮಾಹಿತಿ ಕೊಟ್ಟರೂ ನೋಡುವಾ ಅಂತಾ ಭರವಸೆ ಕೊಡುತ್ತಾರೆ. ಇದರ ಬಗ್ಗೆ ಸೂಕ್ತ ಕ್ರಮವನ್ನು ಜಾರಿಗೊಳಿಸಬೇಕು. ಕೆಲವು ಕಡೆಗಳಲ್ಲಿ ಕಸ ವೆಲೆವಾರಿ ಘಟಕ ಸಂಗ್ರಹಿಸುವುದಿಲ್ಲ. ಕಡ್ಡಾಯವಗಿ ಪ್ರತಿಯೊಂದು ಅಂಗಡಿಗಳಿಗೆ ಕಸ ಸಂಗ್ರಹಿಸಬೇಕು ಎನ್ನುವುದು ಸ್ಥಳಿಯರ ಒತ್ತಾಯ.

ಈ ಕಸದ ರಾಶಿಯಿಂದ ಮಳೆಗಾಲದ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ ಮುಂತಾದ ಸಾಂಕ್ರಮಿಕ ಖಾಯಿಲೆ ಬರುತ್ರದೆ. ಪ್ರತಿ ನಿತ್ಯ ಕಸ ವಿಲೆವಾರಿ ವಾಹನ ದಿನಕ್ಕೆ ಎರಡು ಸಲ ಕೆಲವು ಅಂಗಡಿಗಳಿಗೆ ಕಸವನ್ನು ಸಂಗ್ರಹಿಸುತ್ತಾರೆ. ಕೆಲವು ಕಡೆಯಲ್ಲಿ ಕಸವನ್ನು ಸುಡುತ್ತಾರೆ. ಇಲ್ಲಿ ಬಡ ಜನರಿಗೆ ಒಂದು ಕಾನೂನು ಮತ್ತು ಶ್ರೀಮಂತರಿಗೆ ಒಂದು ಕಾನೂನು ಆಗಿರುತ್ತದೆ. ಕಸ ಸಂಗ್ರ್ರಹಿಸುವ ಬಕೆಟು ತೆಗೆದುಕೊಳ್ಳದಿದ್ದರೆ ಅಂಗಡಿ ಲೈಸೆನ್ಸ್ ರದ್ದು ಮಾಡುತ್ತಾರೆ. ಈ ಕಾನೂನು ಎಲ್ಲಾರಿಗೂ ಅನ್ವಯ ಆಗಬೇಕು ಎನ್ನುವುದು ಸ್ಥಳಿಯರ ಒತ್ತಾಯ ಆಗಿರುತ್ತದೆ.

ಗ್ರಾಮಸ್ಥರು ವಂಡ್ಸೆ

Leave a Reply

Your email address will not be published. Required fields are marked *

error: Content is protected !!