ಆದಿವುಡುಪಿ ತಿಮ್ಮಪ್ಪ ಹೋಟೆಲ್ ಸಿಲ್ ಡೌನ್ ವದಂತಿ: ಮಾಲಕರ ಸ್ಪಷ್ಟನೆ

ಉಡುಪಿ (ಉಡುಪಿ ಟೈಮ್ಸ್ ವರದಿ) : ಆದಿವುಡುಪಿಯಿಂದ ಮಲ್ಪೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಕರಾವಳಿ ಬೈಪಾಸ್ ಬಳಿಯ ಪ್ರಖ್ಯಾತ ಮೀನು ಊಟದ ಹೋಟೆಲ್ ತಿಮ್ಮಪ್ಪ ಸೀಲ್ ಡೌನ್ ಆಗಿದೆ ಎಂದು ಸೋಶಿಯಲ್ ಮಾಧ್ಯಮದಲ್ಲಿ ಕೆಲವೊಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದು, ಸದ್ಯ ಅದು ಈಗ ವೈರಲ್ ಆಗಿದೆ.

“ಉಡುಪಿ ಟೈಮ್ಸ್” ಈ ಬಗ್ಗೆ ಹೋಟೆಲ್ ಮಾಲಕರಲ್ಲಿ ಮಾತನಾಡಿಸಿದಾಗ, ನಿನ್ನೆ ಮತ್ತು ಇಂದು ಸೋಷಿಯಲ್ ಮಾಧ್ಯಮಗಳಲ್ಲಿ ‘ತಿಮ್ಮಪ್ಪ ಸೀಲ್ ಡೌನ್’ ಬರಹದೊಂದಿಗೆ ಹೋಟೆಲಿನ ಚಿತ್ರ ಹಾಕಿ ಯಾರೋ ಕಿಡಿಗೇಡಿಗಳು ಹೋಟೆಲಿನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಸಾರ್ವಜನಿಕರು ಇದನ್ನು ನಂಬಬಾರದು ಎಂದು ವಿನಂತಿ ಮಾಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಯವರು ಜಿಲ್ಲೆಯ ಎಲ್ಲಾ ಹೋಟೆಲ್ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲು ತಿಳಿಸಿದ್ದು, ಅದರಂತೆ ನಮ್ಮ ಸಿಬ್ಬಂದಿಗಳ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದನ್ನೇ ಕಿಡಿಗೇಡಿಗಳು ಅಪಪ್ರಚಾರಕ್ಕೆ ಬಳಸಿದ್ದು, ಹೋಟೆಲ್ ತಿಮ್ಮಪ್ಪ ಸೀಲ್ ಡೌನ್ ಆಗಿಲ್ಲ ಎಂದು ಹೊಟೇಲಿನ ಮಾಲಕರಾದ ಸತೀಶ್ ಮತ್ತು ಕೃಷ್ಣ ಕೋಟ್ಯಾನ್ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!