ಬ್ರಹ್ಮಾವರ: ಬ್ರೇಕ್ ಫೈಲ್ ಆದ ಕಾರು- ಸರಣಿ ಅಪಘಾತ

ಬ್ರಹ್ಮಾವರ ಜು.25(ಉಡುಪಿ ಟೈಮ್ಸ್ ವರದಿ): ಬ್ರೇಕ್ ಫೈಲ್ ಆದ ಕಾರೊಂದು ಡಿವೈಡರ್ ಮೇಲೇರಿದ ಘಟನೆ ಇಂದು ಬ್ರಹ್ಮಾವರದಲ್ಲಿ ನಡೆದಿದೆ.


ಉಡುಪಿ ಕಡೆಯಿಂದ ಬರುತ್ತಿದ್ದ ಕಾರಿನ ಬ್ರೇಕ್ ಫೈಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಮೇಲೆರಿದೆ. ಈ ವೇಳೆ ಕುಂದಾಪುರದ ಕಡೆಯಿಂದ ಬರುತ್ತಿದ್ದ ಟೆಂಪೊ ಸಡನ್ ಬ್ರೇಕ್ ಹೊಡೆದ ಪರಿಣಾಮ ಸ್ಕೀಡಾಗಿ ಡಿವೈಡರ್ ಮೇಲೆರಿ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಕಾರು ಮತ್ತು ಟೆಂಪೋ ಜಖಂಗೊಂಡಿದ್ದು, ಟೆಂಪೊವಿನಲ್ಲಿದ್ದ ಫರ್ನಿಚರನ್ನು ಇನ್ನೊಂದು ವಾಹನಕ್ಕೆ ವರ್ಗಾಯಿಸಿ ಸಾಗಿಸಲಾಯಿತು. ಬಳಿಕ ಜೆಸಿಬಿ ಮೂಲಕ  ಟೆಂಪೊವನ್ನು ತೆರವುಗೊಳಿಸಲಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ವೇಳೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಟೆಂಪೊ ತಗುಲಿದ ಪರಿಣಾಮ ಸ್ಕೂಟರ್ ಸವಾರ ಕೆಳಗೆ ಬಿದ್ದು ಕಾಲಿಗೆ ಸಣ್ಣ ಪುಟ್ಟ ಗಾಯವಾಗಿದೆ‌. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!