ಕಾಪು: ಮೂಳೂರಿನ ಮನೆಗಳಲ್ಲಿ ಸರಣಿ ಕಳ್ಳತನ

ಕಾಪು ಜು.25(ಉಡುಪಿ ಟೈಮ್ಸ್ ವರದಿ): ಕಾಪು ಠಾಣಾ ವ್ಯಾಪ್ತಿಯ ಮೂಳೂರಿನಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ಇಂದು ಬೆಳಕಿಗೆ ಬಂದಿದೆ..

ಇಲ್ಲಿನ ಮುಖ್ಯ ರಸ್ತೆಯ ಬಳಿಯ ಮೂರು ಮನೆಗಳಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವು ಮಾಡಿ ಪರಾರಿಯಾಗಿದ್ದಾರೆ. ಮೂಳೂರು ಈಸ್ಟ್ ವೆಸ್ಟ್ ನರ್ಸರಿ ಸಮೀಪದ ಮಹಮ್ಮದ್ ರಫೀಕ್, ಮಧುರ ಕಾಂಪೌಂಡ್ ನಿವಾಸಿ ಇಬ್ರಾಹಿಂ ಹಾಗೂ ಶಹನಾಜ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಈ ಮನೆಮಂದಿಯೆಲ್ಲಾ ಮನೆಗೆ ಬೀಗ ಹಾಕಿ ಹೊರ ಹೋಗಿದ್ದನ್ನೇ ಬಂಡವಾಳವನ್ನಾಗಿಸಿದ ಕಳ್ಳರು ಮನೆಗೆ ನುಗ್ಗಿ ಅಪಾರ ಮೌಲ್ಯದ ನಗ, ನಗದು ಕಳವುಗೈದಿದ್ದಾರೆ. ಕಳವಾಗಿರುವ ಸೊತ್ತುಗಳ ಮೌಲ್ಯ ಎಷ್ಟಿರಬಹುದು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.

ಈ ಮನೆಮಂದಿಗಳ ಚಲನ ವಲನಗಳ ಬಗ್ಗೆ ತಿಳಿದಿರುವವರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಹಾಗೂ ಕಾಪು ಪಿಎಸ್ಸೈ ರಾಘವೇಂದ್ರ ಅವರ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಸ್ಥಳಕ್ಕೆ ಶ್ವಾನದಳ ಸಹಿತ ಬೆರಳಚ್ಚು ತಜ್ಞರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!