ಮಣಿಪಾಲ: ಬಾಲಕಿ ನಾಪತ್ತೆ- ಲುಕೌಟ್ ನೋಟಿಸ್ ಜಾರಿ

ಉಡುಪಿ ಜು.23 (ಉಡುಪಿ ಟೈಮ್ಸ್ ವರದಿ): ಮಣಿಪಾಲದ ಪೆರಂಪಳ್ಳಿಯಿಂದ 3 ತಿಂಗಳ ಹಿಂದೆ ನಾಪತ್ತೆಯಾದ ಬಾಲಕಿ ಪತ್ತೆಯಾಗದ ಹಿನ್ನೆಲೆ ಪೊಲೀಸರು ಇದೀಗ ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.

ಅವೀನಾ (16) ನಾಪತ್ತೆಯಾಗಿರುವ ಬಾಲಕಿ. ಈಕೆ ಎ.13 ರಂದು ಪೆರಂಪಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದು ಈ ವರೆಗೆ ಪತ್ತೆಯಾಗಿಲ್ಲ.

ಈ ಕುರಿತಾಗಿ ಲುಕೌಟ್ ನೋಟಿಸ್‍ ಜಾರಿ ಮಾಡಿರುವ ಪೊಲೀಸರು ಬಾಲಕಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಮಣಿಪಾಲ ಪೊಲೀಸ್ ಇನ್ಸ್‍ಪೆಕ್ಟರ್ ದೂ.ಸಂ. 9480805448, ಮಣಿಪಾಲ ಪೊಲೀಸ್ ಠಾಣಾ ದೂ.ಸಂ 0820-2570328, ಪಿಎಸ್‍ಐ ದೂ.ಸಂ 9480805475 ಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!