ಬ್ರಹ್ಮಾವರ: ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶ ರದ್ದು

ಬ್ರಹ್ಮಾವರ: ಪಟ್ಟಣಕ್ಕೆ ಕರ್ನಾಟಕ ಗ್ರಾಮಾಂತರ ಯೋಜನಾ ಖಾಯ್ದೆ 1961 ರ ಕಲಂ 4Aರ ಅನ್ವಯ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಿ ಆದೇಶಿಸಲಾಗಿತ್ತು.

ಆದರೆ ಬ್ರಹ್ಮಾವರ ಪಟ್ಟಣಕ್ಕೆ ಪುರಸಭೆ ಘೋಷಣೆ ಮಾಡುವ ಪ್ರಕ್ರಿಯೆ ಪ್ರಸ್ತುತ ಸ್ಥಗಿತಗೊಂಡಿರುತ್ತದೆ. ಇದರಿಂದಾಗಿ ಚಾಂತಾರು, ಹಾರಾಡಿ, ವಾರಂಬಳ್ಳಿ, ಹಂದಾಡಿ ಈ ನಾಲ್ಕು ಪಂಚಾಯತ್ ಗಳಲ್ಲಿ 9 &11 ಹಾಗೂ ಕಟ್ಟಡ ಲೈಸನ್ಸ್ ನೀಡುವಲ್ಲಿ ಜನರಿಗೆ ತಾಂತ್ರಿಕ  ತೊಂದರೆಯಾಗುತ್ತಿತ್ತು. ಈ ಅಂಶವನ್ನು ಮನಗಂಡು ಶಾಸಕರಾದ ಕೆ. ರಘುಪತಿ ಭಟ್ ಅವರು ಮುಖ್ಯಮಂತ್ರಿಗಳಿಗೆ ಬ್ರಹ್ಮಾವರ ಯೋಜನಾ ಪ್ರಾಧಿಕಾರವನ್ನು ರದ್ದುಪಡಿಸಲು ವಿಶೇಷ ಮನವಿ ನೀಡಿರುತ್ತಾರೆ.

ಮುಖ್ಯಮಂತ್ರಿಗಳು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಂದಕ್ಕೆ ಬ್ರಹ್ಮಾವರ ಪಟ್ಟಣ ಪುರಸಭೆ ಆಗುವವರೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 4 ಬಿ ರನ್ವಯ ಬ್ರಹ್ಮಾವರ ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶ ಘೋಷಣೆ ಮಾಡಿರುವುದನ್ನು ಈ ಕೂಡಲೆ ಜಾರಿಗೆ ಬರುವಂತೆ ರದ್ದುಪಡಿಸಿದೆಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ

Leave a Reply

Your email address will not be published. Required fields are marked *

error: Content is protected !!