ಕಾಪು: ಮಾದಕ ವಸ್ತು ಸೇವನೆ- ಮೂವರು ಯುವಕರು ವಶಕ್ಕೆ

ಕಾಪು ಜು.23 (ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವಕರನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 ಸಮಿತ್ ತೆಜ್‍ಪಾಲ್ (20), ಸಂಪತ್ ಬಂಗೇರಾ (23), ಥಾಮ್ಸನ್ (24) ಪೊಲೀಸರು ವಶಕ್ಕೆ ಪಡೆದ ಯುವಕರು.

ಜು.16 ರಂದು ಕಾಪು ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಗೋಪಾಲ ಶೆಟ್ಟಿಗಾರ ಅವರು ಇತರ ಸಿಬ್ಬಂದಿ ಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೂವರು ಯುವಕರು ನಶೆಯಲ್ಲಿದ್ದ ಬಗ್ಗೆ ಅನುಮಾನಗೊಂಡು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಮೂವರು ಯುವಕರ ಪೈಕಿ, ಉದ್ಯಾವರ ಮೇಲ್ಪೇಟೆ ಹತ್ತಿರ ಸಮಿತ್ ತೆಜ್‍ಪಾಲ್ ನನ್ನು, ಕಾಪು ತಾಲೂಕಿನ ಏಣಗುಡ್ಡೆ ಗ್ರಾಮದ ಕಟಪಾಡಿ ಜಂಕ್ಷನ್ ಹತ್ತಿರ ಸಂಪತ್ ಬಂಗೇರಾ ನನ್ನು ಹಾಗೂ ಕಾಪು ತಾಲೂಕಿನ ಕಾಪು ಪಡು ಗ್ರಾಮದ ಕಾಪು ಬೀಚ್ ಹತ್ತಿರ ಥಾಮ್ಸನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ಯುವಕರು ಮಾದಕ ವಸ್ತು ಸೇವೆ ಮಾಡಿರುವುದನ್ನು ಖಚಿತ ಪಡಿಸಲು ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಂತೆ ಜು.19 ರಂದು ವೈದ್ಯರು ನೀಡಿದ ವರದಿಯಲ್ಲಿ ಮೂವರು ಯುವಕರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!