ಶಿರ್ವ: ಲಯನ್ಸ್ ಕ್ಲಬ್’ನ ಅಧ್ಯಕ್ಷರಾಗಿ ಲ.ಜಾರ್ಜ್ ಅನಿಲ್ ಡಿ ಸೋಜಾ ಅಧಿಕಾರ ಸ್ವೀಕಾರ

ಶಿರ್ವ ಜು.21(ಉಡುಪಿ ಟೈಮ್ಸ್ ವರದಿ): ಶಿರ್ವ ಮಂಚಕಲ್‍ನ ಲಯನ್ಸ್ ಕ್ಲಬ್‍ನ ನೂತ ಅಧ್ಯಕ್ಷರಾಗಿ ಆಯ್ಕೆಯಾದ ಲ. ಜಾರ್ಜ್ ಅನಿಲ್ ಡಿ ಸೋಜಾ ಅವರ ಪದಗ್ರಹಣ ಸಮಾರಂಭ ಮಂಗಳವಾರ ಶಿರ್ವದ ಮಿಲನ್ ಹೋಟೆಲ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ದ್ವಿತೀಯ ಗವರ್ನರ್ ಲ.ಡಾ. ನೇರಿ ಕರ್ನೆಲಿಯೋ ಅವರು ಮಾತನಾಡಿ, ಶಿರ್ವ ಮಂಚಕಲ್‍ನ ಲಯನ್ಸ್ ಕ್ಲಬ್‍ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಲವು ವರುಷಗಳಿಂದ ಉತ್ತಮ ಕಾರ್ಯಗಳ ಮೂಲಕ ಲಯನ್ಸ್ ಕ್ಲಬ್ ತನ್ನ ಪ್ರತಿಷ್ಠೆಯನ್ನು ಉಳಿಕಿಕೊಂಡು ಬಂದಿದೆ. ಲಯನ್ಸ್ ನಲ್ಲಿ ಇರುವವರಿಗೆ ಇರಬೇಕಾದ ಎಲ್ಲಾ ಸದ್ಗುಣಗಳು ನೂತನ ಅಧ್ಯಕ್ಷರಿಗಿದೆ. ಆದ್ದರಿಂದ ಈ ವರ್ಷ ಲಯನ್ಸ್ ಕ್ಲಬ್ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಶಿರ್ವ ಪಂಚಾಯತ್ ನೂತನ ಅಧ್ಯಕ್ಷ ಕೆ.ಆರ್ ಪಾಟ್ಕರ್ ಅವರು ಮಾತನಾಡಿ, ಶಿರ್ವ ಗ್ರಾಮ ಪಂಚಾಯತ್ ನ ಅಭಿವೃದ್ಧಿಯಲ್ಲಿ ಇಲ್ಲಿನ ಲಯನ್ಸ್ ಕ್ಲಬ್ ಸಹಕಾರ ನೀಡಬೇಕು. ಈ ಕ್ಲಬ್‍ನ ವತಿಯಿಂದ ಉತ್ತಮ ಕೆಲಸಗಳ ಮೂಲಕ ಶಿರ್ವದ ಜನತೆಗೆ ಸೇವೆಯನ್ನು ನೀಡುವಂತಾಗಲಿ ಎಂದು ಹರಸಿದರು.

ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಈ ವೇಳೆ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಆರ್ ಪಾಟ್ಕರ್ ಮತ್ತು ಡಾ. ಜೋಸೆಫ್ ಗೋಮ್ಸ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಲಯನ್ಸ್ ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕ ಲ.ಮಹಮ್ಮದ್ ಹನೀಫ್ ಎಂಜೆಎಫ್, ಲ. ಸುರೇಶ್ ಸುವರ್ಣ, ಲ. ರಾಜೀವ್ ಕೋಟ್ಯಾನ್, ಲಯನ್ಸ್ ಕ್ಲಬ್‍ನ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ನಿರ್ಗಮನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಲ. ನೋರ್ಬರ್ಟ್ ಮಚಾದೋ ಮತ್ತು ಲ. ಮೆಲ್ವಿನ್ ಅರನ್ನಾ ಕಾರ್ಯಕ್ರಮ ನಿರೂಪಿಸಿದರೆ, ಕಾರ್ಯದರ್ಶಿ ಲ. ಮೋಹನ್ ನೊರೋನ್ನ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!