ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳರಿಗೆ ಕ್ಲಿನ್ ಚಿಟ್ ನೀಡಿದ ಕೆಎಟಿ

ಉಡುಪಿ ಜು.21(ಉಡುಪಿ ಟೈಮ್ಸ್ ವರದಿ): ಸತ್ಯಕ್ಕೆ ಒಂದಲ್ಲ ಒಂದು ದಿನ ನ್ಯಾಯಾ ಸಿಕ್ಕೇ ಸಿಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಕರ್ತವ್ಯಲೋಪ ಆರೋಪದ ಮೇಲೆ ಅಮಾನತು ಗೊಂಡಿದ್ದ ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳ ಅವರ ವಿರುದ್ಧದ ಆರೋಪಗಳು ನಿರಾಧಾರವಾಗಿದೆ ಎಂದು ಕೆಎಟಿ ತೀರ್ಪು ನೀಡಿದೆ. ಈ ಮೂಲಕ ಅನ್ಯಾಯದ ವಿರುದ್ಧದ ಹೋರಾಟ ದಲ್ಲಿ ಕೆ.ಮಂಜುಳ ಅವರಿಗೆ ನ್ಯಾಯ ಸಿಕ್ಕಂತಾಗಿದೆ.

ಈ ವಿಚಾರವಾಗಿ ಕೆ.ಮಂಜುಳ ಅವರ ಪರ ವಕೀಲರು ಮತ್ತು ಸರಕಾರದ ಪರ ವಕೀಲರ ವಾದ ಮಂಡನೆ ನಡೆದಿದ್ದು, ಒಂದೆಡೆ ಈ ವಿಚಾರದ ವಾದ ಮಂಡನೆ ವೇಳೆ ಸರಕಾರಿ ಪರ ವಕೀಲರು ಕೆ.ಮಂಜುಳ ಅವರ ವಿರುದ್ಧ ಮಾಡಲಾದ ಆರೋಪಗಳಿಗೆ ಸೂಕ್ತವಾದ ದಾಖಲೆ ಆಧಾರಗಳನ್ನು ಒದಗಿಸಿರಲಿಲ್ಲ. ಮತ್ತೊಂದೆಡೆ ಕೆ.ಮಂಜುಳ ಅವರು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸುವ ಎಲ್ಲಾ ಸಾಕ್ಷ್ಯಾದಾರಗಳನ್ನು ಅವರ ಪರ ವಕೀಲರು ಸಲ್ಲಿಸಿದ ಹಿನ್ನೆಲೆ ಕೆಎಟಿಯು ಕೆ. ಮಂಜುಳ ಅವರ ಪರವಾಗಿ ತೀರ್ಪು ನೀಡಿ ಅವರನ್ನು ಅಮಾನತುಗೊಳಿಸಲಾದ ಆದೇಶ ರದ್ದುಪಡಿಸಿದೆ.

ಈ ಮೂಲಕ ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಣಯಿಸಿದಂತೆ ಮಾಡಲಾದ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಇಲಾಖೆ ವಿಫಲವಾಗಿರುತ್ತದೆ. ಆದ್ದರಿಂದ ಕೆ.ಮಂಜುಳ ಅವರ ವಿರುದ್ಧ ಮಾಡಿರುವ ಯಾವುದೇ ಆರೋಪಗಳು ಸಾಬೀತಾಗಿಲ್ಲ. ಅವರ ಮೇಲೆ ಹೊರಿಸಲಾಗಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ. ವಿನಾ ಕಾರಣ ಅವರ ಮೇಲೆ ಸುಳ್ಳು ಆರೋಪ ಹೊರಿಸಿರುವುದು ತಿಳಿದು ಬಂದಿದ್ದು ಅವರನ್ನು ಮತ್ತೆ ಅದೇಸ್ಥಾನಕ್ಕೆ ಮರು ನೇಮಕ ಮಾಡುವಂತೆ ಆದೇಶ ನೀಡಿದೆ.

ತಮ್ಮ ಹೋರಾಟದಲ್ಲಿ ತಮಗೆ ನ್ಯಾಯ ಸಿಕ್ಕಿರುವ ಬಗ್ಗೆ ಉಡುಪಿ ಟೈಮ್ಸ್ ಜೊತೆ ಸಂತಸ ಹಂಚಿಕೊಂಡ ಅವರು, ನನಗೆ ನ್ಯಾಯ ಸಿಕ್ಕಿರುವುದು ಖುಷಿಯಾಗಿದೆ. ನಾನು ಯಾವುದೇ ಪದವಿಗೆ ಆಸೆ ಪಟ್ಟವಳಲ್ಲ ತನಗೆ ಯಾವುದೇ ಹುದ್ದೆ ನೀಡಿದರೂ ತಾನು ಖುಷಿಯಿಂದ ನಿರ್ವಹಿಸುವುದಾಗಿ ತಿಳಿಸಿದ್ದಾರೆ.  

ಈ ಹಿಂದೆ, ತಮ್ಮನ್ನು ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಾನದಿಂದ ಅಮಾನತು ಗೊಳಿಸಿದ ಬಗ್ಗೆ ಮಾತನಾಡಿದ ಅವರು, ತಾನು ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ಕಚೇರಿಯನ್ನು ಭ್ರಷ್ಟಾಚಾರ ಮುಕ್ತ ಕಚೇರಿ ಮಾಡಲು ಹೊರಟಿದಕ್ಕೆ ನನನ್ನು ಅಮಾನತು ಮಾಡಿದ್ದರು ಎಂದು ತಮ್ಮ ನೋವನ್ನು ‘ಉಡುಪಿ ಟೈಮ್ಸ್‘ ಜೊತೆ ಹಂಚಿಕೊಂಡಿದ್ದರು. ಅಲ್ಲದೆ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದಿದ್ದರು ಇದೇ ವೇಳೆ ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ, ಅವ್ಯವಹಾರ ಗಳ ಬಗ್ಗೆ ಮಾಹಿತಿ ನೀಡಿದ ಅವರು ಈಬಗ್ಗೆ ನ್ಯಾಯಕ್ಕಾಗಿ ಹೋರಾಡುವುದಾಗಿಯೂ ತಿಳಿಸಿದ್ದರು.ಇವರ ಅಮಾನತು ವಿಚಾರ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿಯಾಗುತ್ತಿದ್ದಂತೆ ಎಲ್ಲೆಡೆ ವ್ಯಾಪಕ ಆಕ್ರೋಶ ಉಂಟಾಗಿತ್ತು. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆ.ಮಂಜುಳಾ ಅವರ ಪರವಾಗಿಯೇ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. 

13 thoughts on “ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳರಿಗೆ ಕ್ಲಿನ್ ಚಿಟ್ ನೀಡಿದ ಕೆಎಟಿ

  1. ಸತ್ಯಕ್ಕೆ ಜಯ… ಸುಮ್ಮ ಸುಮ್ಮನೆ ಆರೋಪಗಳನ್ನು ಮಾಡಿದವರಿಗೆ ಶಿಕ್ಷೆ ಯಾಗಬೇಕು ಅಂದಾಗ ಮಾತ್ರ ಇಂತಹ ಅಧಿಕಾರಿಗಳು ನೆಮ್ಮದಿಯಯಿಂದ ಇರಲಿಕ್ಕೆ ಸಾಧ್ಯ.

  2. ಸತ್ಯಕ್ಕೆ ಜಯ ಯಾವಾಗಲೂ ಸಿಕ್ಕೆ ಸಿಗುತ್ತದೆ ಪ್ರಾಮಾಣಿ ಕರಾಗಿ ದುಡಿದ ಮೇಡಂ ಅವರಿಗೆ ಶಿಕ್ಷಕರಾದ ನಾವೆಲ್ಲರೂ ಜೊತೆಗಿರುವ.

  3. ಇನ್ನೂ ಹೆಚ್ಚಿನ ಕೆಲಸಗಳನ್ನ ಮಾಡಲು ದೈರ್ಯ ಬಂದಹಾಗೆ ಆಯಿತು ಯಾಕೆಂದ್ರೆ ಸತ್ಯಕ್ಕೆ ಜಯ ಸಿಕ್ಕಿದೆ

  4. ಸತ್ಯಕ್ಕೆ ಒಂದಲ್ಲ ಒಂದು ದಿನ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
    ಸತ್ಯಮೇವ ಜಯತೇ

  5. ನ್ಯಾಯ,ಧರ್ಮ,ಪ್ರಾಮಾಣಿಕತೆಗೆ ಗೆಲುವು ಕಟ್ಟಿಟ್ಟ ಬುತ್ತಿ.ಅಂತಹವರಿಗೆ ತೊಂದರೆ ಅಲ್ಪಕಾಲಿಕ ಸತ್ಯ ಮೇವ ಜಯತೇ

  6. ಇದು ಸತ್ಯಕ್ಕೆ ಸಿಕ್ಕಿದ ಜಯ ಸತ್ಯಮೇವ ಜಯತೆ

Leave a Reply

Your email address will not be published. Required fields are marked *

error: Content is protected !!