ಉಡುಪಿ: ಇಲಾಖಾ ದರದಲ್ಲಿ ತೋಟಗಾರಿಕಾ ಸಸಿಗಳು ಲಭ್ಯ

ಉಡುಪಿ, ಜು.21: ಜಿಲ್ಲೆಯ ತೋಟಗಾರಿಕಾ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ವಿವಿಧ ತೋಟಗಾರಿಕಾ ಕಸಿ ಅಥವಾ ಸಸಿ ಗಿಡಗಳನ್ನು ಉತ್ಪಾದಿಸಿ, ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಉಡುಪಿ ತಾಲೂಕಿನ ಶಿವಳ್ಳಿ, ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ, ಕುಂದಾಪುರ ತಾಲೂಕಿನ ಕುಂಭಾಶಿ ಹಾಗೂ ಕೆದೂರು ಮತ್ತು
ಕಾರ್ಕಳ ತಾಲೂಕಿನ ರಾಮಸಮುದ್ರ ಹಾಗೂ ಕುಕ್ಕಂದೂರು ತೋಟಗಾರಿಕಾ ಕ್ಷೇತ್ರಗಳಲ್ಲಿ ಉತ್ತಮ ಗುಣಮಟ್ಟದ ಅಡಿಕೆ, ಕಸಿಗೇರು,
ಕಾಳುಮೆಣಸು, ಕಸಿ ಕಾಳು ಮೆಣಸು, ತೆಂಗು ಹಾಗೂ ಮಲ್ಲಿಗೆ ಗಿಡಗಳನ್ನು ಉತ್ಪಾದಿಸಲಾಗುತ್ತಿದ್ದು, ಆಸಕ್ತ ರೈತರು ಇದರ
ಸದುಪಯೋಗಪಡೆದುಕೊಳ್ಳಬಹುದು.

ಜಿಲ್ಲೆಯ ರೈತರು ಅಡಿಕೆ (20 ರೂ.), ಕಸಿ ಗೇರು (32 ರೂ.), ಕಾಳುಮೆಣಸು (11 ರೂ.), ತೆಂಗು (70 ರೂ.), ಕಸಿ ಕಾಳುಮೆಣಸು (32
ರೂ.) ಹಾಗೂ ಮಲ್ಲಿಗೆ (10 ರೂ.) ಗಿಡಗಳನ್ನು ಖರೀದಿಸಲು ಸಂಬ0ಧಪಟ್ಟ ತೋಟಗಾರಿಕಾ ಕ್ಷೇತ್ರದ ಅಧಿಕಾರಿಗಳನ್ನು
ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಶಿವಳ್ಳಿ ತೋಟಗಾರಿಕಾ ಕ್ಷೇತ್ರದ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ನಿಧಿಶ ಕೆ.ಜೆ ಮೊ.ನಂ:
9742489714, ವಾರಂಬಳ್ಳಿ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ರಾಮ ನರಸಿಂಹ ಹೆಗಡೆ ಮೊ.ನಂ.
9481864481, ಕೆದೂರು ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಮಧುಕರ್ ಮೊ.ನಂ.9482166313,
ಕುಂಭಾಶಿ ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಅಜಿತ ಅಕ್ಕೊಳ್ಳಿ ಮೊ.ನಂ. 9481721482, ರಾಮಸಮುದ್ರ
ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ನಿರ್ದೇಶಕ ವರುಣ ಕೆ.ಜೆ ಮೊ. ನಂ. 7892326323 ಹಾಗೂ ಕುಕ್ಕಂದೂರು
ತೋಟಗಾರಿಕಾ ಕ್ಷೇತ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಚಿದಾನಂದ ಕಳಕಾಪುರ ಮೊ.ನಂ.9108344017 ಅನ್ನು
ಸಂಪರ್ಕಿಸುವoತೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!