ಕಿರುಕುಳದಿಂದಲೇ ರಶ್ಮಿ ಸಾಮಂತ್‌ ರಾಜೀನಾಮೆ- ಆಕ್ಸ್‌ಫರ್ಡ್‌ ವಿ.ವಿ ತನಿಖಾ ಸಮಿತಿ

ನವದೆಹಲಿ, ಜು17: ಉಡುಪಿಯ ರಶ್ಮಿ ಸಮಂತ್‌ ಅವರು ಬೆದರಿಕೆಗೆ ಮತ್ತು ನಿಂದನೆಗೆ ಒಳಗಾಗಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾ ನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿ, ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚೆಯೇ ರಾಜಿನಾಮೆ ನೀಡಿ ಹುದ್ದೆ ತ್ಯಜಿಸಬೇಕಾಯಿತು ಎಂದು ವಿ.ವಿ ಅಂತರಿಕಾ ತನಿಖಾ ಸಮಿತಿ ಖಚಿತಪಡಿಸಿದೆ.

ಈ ಮೂಲಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಆಂತರಿಕ ತನಿಖೆ ಸಮಿತಿ ರಶ್ಮಿಸಾಮಂತ್‌ ಅವರನ್ನು ಸಮರ್ಥಿಸಿಕೊಂಡಿದೆ. ಈ ಕುರಿತು ಜುಲೈ16 ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ರಶ್ಮಿ ಪರ ವಕೀಲ ಆದಿತ್ಯ ಶ್ರೀನಿವಾಸನ್ ಅವರು, “ತನಿಖೆಯ ಫಲಿತಾಂಶದ ಬಗ್ಗೆ ನನಗೆ ಸಂತೋಷವಾಗಿದೆ. ರಶ್ಮಿಯನ್ನು ಸಾರ್ವಜನಿ ಕ ಅವಮಾನಕ್ಕೆ ಒಳಪಡಿಸಿರುವುದು ದುರದೃಷ್ಟಕರ ಎಂದು ನಾನು ಭಾವಿಸಿದ್ದೇನೆ. ಘಟನೆ ನಡೆದ ಬಳಿಕ ನಿಜಕ್ಕೂ ತಾಳ್ಮೆ ಮತ್ತು ಪರಿಶ್ರಮವನ್ನು ನಾನು ಮೆಚ್ಚುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಚುನಾವಣೆಯಲ್ಲಿ ವಿಜಯ ಸಾಧಿಸಿದ ಬಳಿಕ ರಶ್ಮಿ ಅವರ ವಿರುದ್ದ ಇಸ್ಲಾಮೋಫೋಬಿಕ್, ಟ್ರಾನ್ಸ್‌ಫೋಬಿಕ್ ಎಂದು ಆರೋಪಿಸಿ ಸೈಬರ್‌ ದಾಳಿ ಮಾಡುವ ಮೂಲಕ ರಾಜೀನಾಮೆ ನೀಡುವಂತೆ ಮಾಡಲಾಯ್ತು. ಅವರ ಧರ್ಮ ಹಾಗೂ ಪೋಷಕರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಲಾಗಿತ್ತು. ಈ ಘಟನೆ ಬಳಿಕ ರಶ್ಮಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ರಶ್ಮಿ ಸಮಂತ್ ಅವರು ಆಯ್ಕೆಯಾದ ಬಳಿಕ ಆಕ್ಸ್‌ಫರ್ಡ್‌ನ ಪ್ರಾಧ್ಯಾಪಕ ಡಾ. ಅಭಿಜಿತ್ ಸರ್ಕಾರ್ ರಶ್ಮಿಯ ಪೋಷಕರನ್ನು ವಿವಾದಕ್ಕೆ ಎಳೆದಿದ್ದರು, ರಶ್ಮಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಗವಾನ್ ಶ್ರೀರಾಮನ ಚಿತ್ರವನ್ನು ಹೊಂದಿದ್ದಕ್ಕಾಗಿ ಅವರನ್ನು ನಿಂದಿಸಿದ್ದರು. ಮಾತ್ರವಲ್ಲದೆ ವಿದ್ಯಾರ್ಥಿ ಪರಿಷತ್ ಚುನಾವಣೆಗೆ ರಶ್ಮಿಯವರಿಗೆ ಪ್ರಧಾನಿ ಮೋದಿಯವರು ಧನಸಹಾಯ ನೀಡಿದ್ದಾರೆ ಎಂದು ಹೇಳಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!