ಕೋವಿಡ್-19 ತಡೆಗೆ ಸ್ವದೇಶಿ ಮದ್ದು: ಆ.15ಕ್ಕೆ ಭಾರತದ ಮೊದಲ ಲಸಿಕೆ ಬಿಡುಗಡೆ
ನವದೆಹಲಿ: ಮಾರಕ ಕೋವಿಡ್-19 ವೈರಸ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ಇದಕ್ಕಾಗಿ ಲಸಿಕೆ ಕಂಡು ಹಿಡಿಯಲು ಜಗತ್ತಿನ ಬಹುತೇಕ ದೇಶಗಳು ಪ್ರಯತ್ನಿಸುತ್ತಲೇ ಇವೆ. ಹೀಗೆ ಲಸಿಕೆಗಾಗಿ ಪ್ರಯತ್ನಿಸುತ್ತಿರುವ ದೇಶಗಳ ಪೈಕಿ ಭಾರತವೂ ಒಂದು. ಹೀಗಿರುವಾಗಲೇ ಕೊನೆಗೂ ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಭಾರತ್ ಬಯೋಟೆಕ್ ಕೊರೋನಾಗೆ ಸ್ವದೇಶಿ ಲಸಿಕೆ ಕಂಡು ಹಿಡಿದಿದೆ. ದೇಶದ ಮೊದಲ ಕೋವಿಡ್-19 ವೈರಸ್ ಲಸಿಕೆ ಕೋವಾಕ್ಸಿನ್ ಇದಾಗಿದೆ. ಭಾರತ ಇದೇ ಆಗಸ್ಟ್ 15ನೇ ತಾರೀಕಿನಂದು ಈ ಔಷಧಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿಕೊಂಡಿದೆ.
.ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಕಂಪನಿ ಈ ಲಸಿಕೆ ತಯಾರಿಸಿದೆ. ಇದೀಗ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ಕಂಪನಿ ಆಗಸ್ಟ್ 15ರಂದು ಕೊರೋನಾಗೆ ಔಷಧ ಬಿಡುಗಡೆ ಮಾಡಲು ಮುಂದಾಗಿವೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್, ಹ್ಯೂಮನ್ ಕ್ಲಿನಿಕ್ ಪ್ರಯೋಗಗಳನ್ನು ನಡೆಸಿದ ಬಳಿಕವೇ ಮಾರಕ ಕೊರೋನಾಗೆ ಭಾರತದ ಲಸಿಕೆ ಸಿದ್ಧಪಡಿಸಲಾಗಿದೆ. ಈ ಲಸಿಕೆ ಇದೇ ಆಗಸ್ಟ್ 15ನೇ ತಾರೀಕಿನಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
Medicine for the Covid 19, introducing on August 15, is a great news. God bless all the team of the ICMR, NIV and Bharath Biotech Company who are struggling for the good health and safety of the people.