ಬಿಜೆಪಿ ಮತ್ತು ವಾಸ್ತವವನ್ನು ಎದುರಿಸಲು ಹೆದರುವವರು ಪಕ್ಷ ಬಿಡಲು ಸ್ವತಂತ್ರರು, ನಿರ್ಭೀತರಿಗೆ ಸ್ವಾಗತ: ರಾಹುಲ್ ಗಾಂಧಿ
ನವದೆಹಲಿ: ಬಿಜೆಪಿ ಮತ್ತು ವಾಸ್ತವವನ್ನು ಎದುರಿಸಲು ಹೆದರುವವರು ಪಕ್ಷವನ್ನು ಬಿಡಲು ಸ್ವತಂತ್ರರು. ಹಾಗೆ ಹೊರಗಿನ ನಿರ್ಭೀತ ನಾಯಕರು ಪಕ್ಷವನ್ನು ಸೇರಬಹುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಜ್ಯೋತಿರಾಧಿತ್ಯ ಸಿಂದಿಯಾರನ್ನು ಉಲ್ಲೇಖಿಸಿ ಮಾತನಾಡಿದ ಅವರು ಭಯಭೀತರಾದವರು ಪಕ್ಷವನ್ನು ತೊರೆದಿದ್ದಾರೆ. ಹಾಗೆ ಹೆದರದ ಅನೇಕ ನಾಯಕರೂ ಇದ್ದಾರೆ. ಅದೇ ರೀತಿ ಕಾಂಗ್ರೆಸ್ ಹೊರಗೆ ಇದ್ದಾರೆ. ಇವರೆಲ್ಲ ನಮ್ಮವರಾಗಿದ್ದಾರೆ. ಅವರನ್ನು ಪಕ್ಷಕ್ಕೆ ಕರೆತನ್ನಿ. ನಮ್ಮ ಪಕ್ಷದೊಳಗಿನ ಭಯಭೀತರನ್ನು ಹೊರ ಹಾಕಬೇಕು ಎಂದು ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಗೆ ತಿಳಿಸಿದರು.
ಕೆಲ ಆರ್ಎಸ್ಎಸ್ ನವರಿದ್ದು ಅವರೆಲ್ಲಾ ಪಕ್ಷ ಬಿಟ್ಟು ಹೋಗಬೇಕು. ಅವರು ಸಂತೋಷಪಡಲಿ. ನಮಗೆ ಅವರು ಬೇಡ. ನಮಗೆ ಅವರ ಅಗತ್ಯವಿಲ್ಲ. ನಮಗೆ ನಿರ್ಭೀತ ಜನರು ಬೇಕು. ಇದು ನಮ್ಮ ಸಿದ್ಧಾಂತ. ಇದು ನಿಮಗೆ ನನ್ನ ಮೂಲ ಸಂದೇಶ ಎಂದು ಅವರು ಹೇಳಿದರು.
ಸಿಂಧಿಯಾ ಉದಾಹರಣೆಯನ್ನು ಉಲ್ಲೇಖಿಸಿ ಅವರು ಪಕ್ಷವನ್ನು ಉಳಿಸಬೇಕಿತ್ತು. ಆದರೆ ಹೆದರಿಕೊಂಡು ಪಕ್ಷ ಬಿಟ್ಟು ಆರ್ ಎಸ್ ಎಸ್ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ನ ಹಲವು ಹಿರಿಯ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ಸೇರಲು ಪಕ್ಷವನ್ನು ತೊರೆದಿ ದ್ದಾರೆ. ಅವರಲ್ಲಿ ಸಿಂಧಿಯಾ ಮತ್ತು ಜಿತಿನ್ ಪ್ರಸಾದ ಸೇರಿದ್ದಾರೆ. ಇನ್ನು ನಟಿ ಖುಷ್ಬೂ ಸುಂದರ್ ಅವರಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರಾದ ನಾರಾಯಣ್ ರಾಣೆ ಮತ್ತು ರಾಧಾಕೃಷ್ಣ ವಿಖ್ ಪಾಟೀಲ್ ಕೂಡ 2019ರಲ್ಲಿ ಪಕ್ಷವನ್ನು ತ್ಯಜಿಸಿದ್ದರು.
ಜೂಮ್ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಹುಲ್ ಗಾಂಧಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ಸುಮಾರು 3,500 ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು.