ಉಡುಪಿ: ಜಿಲ್ಲೆಗೆ ಇಂದು ಶಾಕಿಂಗ್ ನ್ಯೂಸ್?
ಉಡುಪಿ: (ಉಡುಪಿ ಟೈಮ್ಸ್ ವರದಿ) ಮುಂಬಯಿಂದ ಹಾಗೂ ದುಬೈಯಿಂದ ಉಡುಪಿಗೆ ಆಗಮಿಸಿದವರಿಂದ ಇಂದು ಮತ್ತಷ್ಟು ಕೊರೋನ ಪಾಸಿಟಿವ್ ಬರುವ ಸಾಧ್ಯತೆ ಇದೆಂಬ ಮಾಹಿತಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊರ್ವರಿಂದ ಬಂದಿದೆ.
ಮೊದಲು ಉಡುಪಿಯಲ್ಲಿ ಕಾಣಿಸಿಕೊಂಡಿದ್ದು ಮೂರು ಕೊರೋನ ಪಾಸಿಟಿವ್ ಪ್ರಕರಣ. ಅನಂತರ ಮೇ 15 ರವರೆಗೆ ಇಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿರಲಿಲ್ಲ. ಆದರೆ ಮೇ 15 ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ 20 ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ ದುಬೈಯಿಂದ ಬಂದ ಎಂಟು, ಮುಂಬೈಯಿಂದ ಬಂದ 12 ಹಾಗೂ ಕೇರಳದ ತಿರುವನಂತಪುರಂಗೆ ಭೇಟಿ ನೀಡಿದ, ಮತ್ತು ಚಿತ್ರದುರ್ಗಾದ ಬಾಲಕಿ ಸೇರಿ ಒಟ್ಟು 22 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ.
ಮೇ 18 ರಂದು ದುಬೈಯಿಂದ ಬಂದಿರುವ 48 ಮಂದಿ ಉಡುಪಿ ಮತ್ತು ಮಣಿಪಾಲಗಳ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ವರದಿ ಇಂದು ಹೊರಬೀಳುವ ನಿರೀಕ್ಷೆ ಇದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ಅನುಮಾನ ನಿಜವಾದರೆ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಜಿಲ್ಲೆಯ ಆರೋಗ್ಯ ಇಲಾಖೆ ನಿನ್ನೆ ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ಒಟ್ಟು 987 ಮಾದರಿಗಳ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಇವುಗಳ ಪರೀಕ್ಷೆ ಮಣಿಪಾಲ ಹಾಗೂ ಮಂಗಳೂರಿನ ಪ್ರಯೋಗಾಲಯದಲ್ಲಿ ನಡೆಯಲಿದ್ದು, ಇಂದು ಅವುಗಳಲ್ಲಿ ಹೆಚ್ಚಿನ ವರದಿ ಕೈಸೇರಬಹುದು ಎಂಬ ನಿರೀಕ್ಷೆ ಅವರು.