ಡಿಕೆಶಿ ಪದಗ್ರಹಣ: ಉಡುಪಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಸಂಚಲನ

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಸ್ವೀಕಾರ ಕಾರ್ಯಕ್ರಮದ ವೀಕ್ಷಣೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಭಂಡಾರಿ ಉದ್ಘಾಟಿಸಿದರು. ಈ ಸಂದರ್ಭ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್ ಸಭಾಪತಿ, ಕೆ. ಕೃಷ್ಣಮೂರ್ತಿ ಆಚಾರ್ಯ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ಅಮೀನ್, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ದಿವಾಕರ ಶೆಟ್ಟಿ, ವೈ ಸುಕುಮಾರ್, ಶಬ್ಬೀರ್ ಅಹಮ್ಮದ್, ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.

ಉಪ್ಪೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರ ನಿವಾಸದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾ ಕಾರ್ಯಕ್ರಮದ ವೀಕ್ಷಣೆ ಮಾಡಿದರು.

ಅಮ್ಮಣಿ ರಾಮಣ್ಣ ಶೆಟ್ಟಿ ಹಾಲ್ ನಲ್ಲಿ ಡಿಕೆಶಿ ಪದಗ್ರಹಣ ಸಮಾರಂಭ ವೀಕ್ಷಣೆ ಕಾರ್ಯಕ್ರಮದ ನೇತೃತ್ವವನ್ನು ರಮೇಶ್ ಕಾಂಚನ್, ಚಂದ್ರಮೋಹನ್, ವಿಜಯ ಪೂಜಾರಿ, ಜ್ಯೋತಿ ಹೆಬ್ಬಾರ್, ಪ್ರಣಮ್, ಹಿಲ್ಲಾರಿ ಜತ್ತನ್ನಾ ವಹಿಸಿದ್ದರು. ವಿಘ್ನೇಶ್ ಕಿಣಿ, ಚಂದ್ರಿಕಾ ಶೆಟ್ಟಿ, ನರಸಿಂಹ ಮೂರ್ತಿ ಉಪಸ್ಥಿತರಿದ್ದರು.

ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಆಶ್ರಯದಲ್ಲಿ ಜರಗಿದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪ್ರತಿಜ್ಞಾ ಸ್ವೀಕಾರ ಸಮಾರಂಭದ ಝೂಮ್ ಆಪ್ ಪ್ರಸಾರವನ್ನು ಹಿರಿಯ ಕಾರ್ಯಕರ್ತರಾದ ಮಾಜಿ ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಳಾ ಎಸ್. ಕೋಟ್ಯಾನ್, ಮಾಜಿ ಪಂಚಾಯತ್ ಸದಸ್ಯ ರಾಬರ್ಟ್ ಫೆರ್ನಾಂಡಿಸ್, ಮತ್ತು ಹಮೀದ್ ಸಾಬ್ಜಾನ್ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ಕುಮಾರ್, ಮಾಜಿ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು 100 ಕ್ಕೂ ಹೆಚ್ಚು ಕಾರ್ಯಕರ್ತರು ವೀಕ್ಷಿಸಿದರು.

ಪರ್ಕಳದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕರಾದ ಯು.ಆರ್ ಸಭಾಪತಿ ಲೈವ್ ಕಾರ್ಯಕ್ರಮ ವೀಕ್ಷಣೆಗೆ ಚಾಲನೆ ನೀಡಿದರು. ಪರ್ಕಳದ ಕಾಂಗ್ರೆಸ್ ಮುಖಂಡ ಮೋಹನ್‌ದಾಸ್ ನಾಯಕ್ ಡಿಕೆಶಿ ಭಾವಚಿತ್ರಕ್ಕೆ ಹಾಲೆರೆದು, ಸರ್ವಕಾರ್ಯಕರ್ತರು ಜೊತೆಗೂಡಿ ತೆಂಗಿನಕಾಯಿ ಒಡೆದು ಶುಭಕೋರಿ ಜೈಕಾರಹಾಕುತ್ತಾ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಜಯ ಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು, ಅನಂತ್ ನಾಯ್ಕ ಸರಳಬೆಟ್ಟು, ದೇವಕಿ ಪೂಜಾರಿ ನೆಹರು ನಗರ. ಬಾಲಕೃಷ್ಣ ಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕಳ, ಉಪೇಂದ್ರ ನಾಯ್ಕ ತುಳಜಾ, ಸದಾನಂದ ಪೂಜಾರಿ ಪರ್ಕಳ, ಸುಜಿತ್ ಶೆಟ್ಟಿಗಾರ್ ಪರ್ಕಳ, ವಾಲ್ಟರ್ ಡಿಸೋಜ ಕೊಳಲಗಿರಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!