ದುಬೈ: ಜೆಬೆಲ್ ಅಲಿ ಬಂದರಿನಲ್ಲಿ ಸರಕು ಸಾಗಾಟದ ಹಡಗೊಂದರಲ್ಲಿ ಭಾರೀ ಸ್ಪೋಟ

ದುಬೈ, ಜು.8 : ಇಲ್ಲಿನ ಜೆಬೆಲ್ ಅಲಿ ಬಂದರಿನಲ್ಲಿ ಸರಕು ಸಾಗಾಟದ ಹಡಗೊಂದರಲ್ಲಿ ಭಾರೀ ಸ್ಪೋಟ ಸಂಭವಿಸಿದೆ.

ಇಲ್ಲಿನ ಮುಖ್ಯ ಬಂದರಿನಲ್ಲಿ  ಹಡಗಿನಲ್ಲಿ ಸ್ಫೋಟ ಮತ್ತು  ಸಂಭವಿಸಿದೆ. ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ಬೆಂಕಿ ಅನಾಹುತ ಸಂಭವಿಸಿದೆ. ಹಡಗಿನಲ್ಲಿ ಉಂಟಾದ ಸ್ಪೋಟದಿಂದ ಸುತ್ತಮುತ್ತಲ ಮೂರು ಮನೆಗಳ ಬಾಗಿಲು ಹಾಗೂ ಕಿಟಕಿಗಳು ಕಂಪಿಸಿದವು.ಘಟನೆಯಲ್ಲಿ ಯಾವುದೇ ಸಾವು ಸೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. 

ಇನ್ನ ಈ ಘಟನೆಯಿಂದಾಗಿ ಇತರ ಹಡಗುಗಳ ಮಾಮೂಲಿ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅಧಿಕೃತ ಮೂಲಗಳು ಹೇಳಿವೆ. “ಈ ಸ್ಫೋಟ ಸಂಭವಿಸಿದ ಬಳಿಕ ಕಂಟೈನರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ದುಬೈ ಮಾಧ್ಯಮ ಕಚೇರಿ ಟ್ವೀಟ್ ಮಾಡಿದೆ. 

ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯಾ ಮಾಡಿದ್ದು, ಈ ಕಾರ್ಯಕ್ಕೆ ಹೆಲಿಕಾಪ್ಟರ್ ಒಂದನ್ನು ಕೂಡಾ ನಿಯೋಜಿಸಲಾಗಿದೆ. ಇನ್ನು ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ. ಈ ಹಡಗು ನಿಲುಗಡೆಗೆ ಸಜ್ಜಾಗುತ್ತಿತ್ತು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!