ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೆ 1.10ಲಕ್ಷ ಸಾವು ಸಂಭವಿಸುತ್ತಿರಲಿಲ್ಲ- ಅಧ್ಯಯನ ವರದಿ

ನವದೆಹಲಿ: ಕೋವಿಡ್‌–19 ಎರಡನೇ ಅಲೆಯ ಸಂದರ್ಭದಲ್ಲಿ ಮಾರ್ಚ್‌ ತಿಂಗಳ ಮಧ್ಯದಲ್ಲೇ ಲಾಕ್‌ಡೌನ್‌ ಘೋಷಿಸಿದ್ದರೆ ಸುಮಾರು 1.3 ಕೋಟಿ ಪ್ರಕರಣಗಳು ಕಡಿಮೆಯಾಗುತ್ತಿದ್ದವು ಮತ್ತು 1.10 ಲಕ್ಷ ಸಾವುಗಳು ಸಂಭವಿಸುತ್ತಿರಲಿಲ್ಲ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಬಹುತೇಕ ರಾಜ್ಯಗಳು ತಡವಾಗಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಮಿಷಿಗನ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ತಜ್ಞ ಭ್ರಮಾರ್‌ ಮುಖರ್ಜಿ ಅವರು, ಕೋವಿಡ್‌–19 2ನೇ ಅಲೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ.

2020ರ ಡಿಸೆಂಬರ್‌ ಮತ್ತು 2021ರ ಜನವರಿಯಲ್ಲಿ ಕಡಿಮೆ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಮಹಾರಾಷ್ಟ್ರ, ಪಂಜಾಬ್‌ ಮತ್ತು ಛತ್ತೀಸಗಡದಲ್ಲಿ 2021ರ ಫೆಬ್ರುವರಿಯಿಂದಲೇ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗತೊಡಗಿತು. ಆದರೂ, ಕಠಿಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ವರದಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಏಪ್ರಿಲ್‌ 14ರಂದು ಲಾಕ್‌ಡೌನ್‌ ಜಾರಿಗೊಳಿಸಲಾಯಿತು. ಆದರೆ, ಇದು ತಡವಾಗಿತ್ತು. ಈ ಸಮಯಕ್ಕೆ ದೇಶದಾದ್ಯಂತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಮಾರ್ಚ್‌ ಮಧ್ಯದಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿತ್ತು ಎಂದು ಮುಖರ್ಜಿ ತಿಳಿಸಿದ್ದಾರೆ. 

1 thought on “ಮಾರ್ಚ್‌ ತಿಂಗಳಲ್ಲಿ ಲಾಕ್‌ಡೌನ್‌ ಘೋಷಿಸಿದ್ದರೆ 1.10ಲಕ್ಷ ಸಾವು ಸಂಭವಿಸುತ್ತಿರಲಿಲ್ಲ- ಅಧ್ಯಯನ ವರದಿ

  1. If India announced total lock down in April 2021 it would have been disaster to all. Thanks God !Our Government did not listen to Dr Antony Fauci or Rahul Gandhi’s call for total lock down ! India takes it own decision to save Indians !

Leave a Reply

Your email address will not be published. Required fields are marked *

error: Content is protected !!