ಯುದ್ಧ ನಡೆಸಿರುವ ಸಕಾ೯ರಗಳೊಂದಿಗೆ ನಿಲ್ಲಲು ಹೇಗೆ ಸಾಧ್ಯ? ಸಿಪಿಐ(ಎಂ) ಪ್ರಶ್ನೆ

ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನತೆಯ ನೆರವಿಗೆ ದಾವಿಸದೆ ಜನತೆಯ ಮೇಲೆ ಯುದ್ಧ ನಡೆಸಿರುವ ಸಕಾ೯ರಗಳ ಜೊತೆ ಹೇಗೆ ತಾನೆ ನಿಲ್ಲಲು ಸಾಧ್ಯ ಎಂದು ಯುದ್ಧದ ವೇಳೆ ಸಕಾ೯ರದೊಂದಿಗೆ ನಿಲ್ಲ ಬೇಕೆಂದಿರುವ ಆರ್.ಎಸ್.ಎಸ್.ನ ಸರ ಕಾಯ೯ವಾಹಕರಾದ ದತ್ತಾತ್ರೇಯ ಹೊಸ ಬಾಳೆಯವರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಪ್ರಶ್ನಿಸಿವೆ. ಕೆಳಗಿನ 15 ಪ್ರಶ್ನೆಗಳನ್ನು ಸಿಪಿಐ(ಎಂ) ಆರ್.ಎಸ್.ಎಸ್ಗೆ ಹಾಕಿದೆ.


1) ಲಾಕ್ಡೌನ್ ಸಂತ್ರಸ್ತರ ಪರಿಹಾರ ಕಾಯ೯ದಲ್ಲು ರಾಜಕೀಯ ಮಾಡುವ ಸಕಾ೯ರಕ್ಕೆ ಬೆಂಬಲ ನೀಡ ಬೇಕ ?

 2)ಮತದಾರರಿಗೆ ಮಾತ್ರ ರೇಷನ್ ಕಿಟ್ ವಿತರಿಸಿ ನೈಜ ಫಲಾನುಭವಿಗಳಿಗೆ ರೇಷನ್ ಕಿಟ್ ನೀಡದ ಸಕಾ೯ರಕ್ಕೆ ಬೆಂಬಲಿಸಬೇಕ ?
3) ಬಿಲ್ಡರಗಳ ಲಾಭಿಗೆ ಮಣಿದು ವಲಸೆ ಕಾಮಿ೯ಕರನ್ನು ತಮ್ಮ ಊರಿಗೆ ಹೋಗದಂತೆ ತಡೆಯಲು ಯತ್ನಿಸಿದ ಸಕಾ೯ರಕ್ಕೆ ಬೆಂಬಲಿಸ ಬೇಕ ?
4) 29.3.2020 ರ ಮಾಗ೯ದಶಿ೯ ಆದೇಶದಲ್ಲಿ ಲಾಕ್ಡೌನ್ ಕಾಲಾವಧಿಯಲ್ಲಿ ವೇತನ ನೀಡಬೇಕು ಮತ್ತು ಕೆಲಸದಿಂದ ತೆಗೆಯ ಬಾರದು ಎಂದು ಹೇಳಿ ಆನಂತರ ಅದನ್ನು ಸುಪ್ರಿಂ ಕೋಟ್೯ನಲ್ಲಿ ಪ್ರತಿಪಾದಿಸದೆ, ನಂತರ 17.5.2020 ರ ಆದೇಶದಲ್ಲಿ ಹಿಂದೆ ಪಡೆದ ಸಕಾ೯ರ ಬೆಂಬಲಿಸ ಬೇಕ ?
5) 13.04.020 ರಂದು ವೇತನ ನೀಡದ ಮತ್ತು ಕೆಲಸ ದಿಂದ ತೆಗೆಯುವ ಮಾಲೀಕರ ಮೇಲೆ ಕ್ರಮಕ್ಕೆ ಆದೇಶ ನೀಡಿ ಮಾಲೀಕರ ಒತ್ತಡಕ್ಕೆ ಮಣಿದು 15.4.2020 ರಂದು ಆದೇಶ ಹಿಂಪಡೆದ ರಾಜ್ಯ ಸಕಾ೯ರವನ್ನು ಬೆಂಬಲಿಸ ಬೇಕ ?
6)ವೇತನ ನೀಡದ ಕೆಲಸದಿಂದ ತೆಗೆಯುವ ಮಾಲೀಕರ ವಿರುದ್ಧ ದೂರು ಸ್ವೀಕರಿಸಲು ಆದೇಶಿಸಿದ ಕಾಮಿ೯ಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಮಾಲೀಕರ ಒತ್ತಡಕ್ಕೆ ಮಣಿದು ರಾತ್ರೋರಾತ್ರಿ ವಗಾ೯ವಣೆ ಮಾಡಿರುವ ರಾಜ್ಯ ಸಕಾ೯ರವನ್ನು ಬೆಂಬಲಿಸ ಬೇಕ ?

7) ವಲಸೆ ಕಾಮಿ೯ಕರಿಗೆ ಉಚಿತ ರೈಲು ವ್ಯವಸ್ಥೆ ಮಾಡದ, ಅವರನ್ನು ನೆಡೆದು ಹೋಗುವ ದಯನೀಯ ಪರಿಸ್ಥಿತಿಗೆ ದೂಡಿ ದಾರಿಯಲ್ಲಿ ಸಾಯಲು ಬಿಟ್ಟು ಅವರನ್ನು ತುಚ್ಛವಾಗಿ ಕಾಣುವ ಹೀಯಾಳಿಸುವ ಹೇಳಿಕೆ ನೀಡುವ ನಾಯಕರನ್ನು ನಿಯಂತ್ರಿಸುವ ಕೆಲಸ ಮಾಡದ ಸಕಾ೯ರವನ್ನು ಬೆಂಬಲಿಸ ಬೇಕ ?
8) ರೈತರಿಗೆ ಮಾರಕವಾದ ಎಪಿಎಂಸಿ ಸುಗ್ರೀವಾಜ್ಞೆ ಹೊರಡಿಸಿರುವ ರಾಜ್ಯ ಸಕಾ೯ರವನ್ನು ಬೆಂಬಲಿಸಿ ಬೇಕ?

 9)ಲಾಕ್ಡೌನ್ ಪರಿಸ್ಥಿತಿ ಬಳಸಿ ಕಾಮಿ೯ಕ ಹಕ್ಕುಗಳನ್ನು ಮೊಟಕುಗೊಳಿಸುವ,ಕೆಲಸದ ಅವಧಿ ಹೆಚ್ಚಳ ಮಾಡುವ, ಕಾಮಿ೯ಕ ಕಾನೂನುಗಳನ್ನು ಅಮಾನತ್ತುಗೊಳಿಸಲು ಸುಗ್ರೀವಾಜ್ಞೆ ಹೊರಡಿಸುವ ಸಕಾ೯ರವನ್ನು ಬೆಂಬಲಿಸ ಬೇಕ ? 

10)ಕೋವಿಡನ್ನು ಧಮ೯ಕ್ಕೆ ಅಂಟಿಸಿ ಪ್ರಚುರ ಪಡಿಸಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲವು ಮಾಧ್ಯಮದ ಮೇಲೆ ಕ್ರಮವಹಿಸದ  ಮತ್ತು ಅದಕ್ಕೆ ಪೂರಕ ಹೇಳಿಕೆ ನೀಡುವ ತಮ್ಮದೆ ನಾಯಕರ ಮೇಲೆ ಅಗತ್ಯ ಕ್ರಮ ವಹಿಸದ ಸಕಾ೯ರವನ್ನು ಬೆಂಬಲಿಸ ಬೇಕ ?
11) ಪರಿಹಾರದ ಹೆಸರಲ್ಲಿ ಕೇವಲ ಅಂಕಿ ಸಂಖ್ಯೆಗಳ ಪ್ಯಾಕೇಜ್ ಪ್ರಕಟಿಸಿ ಮಾಲೀಕರಿಗೆ ಪರಿಹಾರ ನೀಡುವ ಕಾಮಿ೯ಕರಿಗೆ ಯಾವುದೇ ಪರಿಹಾರ ನೀಡದ ವೇತನವನ್ನು ಇಲ್ಲದಂತೆ ಮಾಡುವ ಸಕಾ೯ರದ ನಿಲುಮೆಯನ್ನು ಬೆಂಬಲಿಸಿ ಬೇಕ ?
12)ಲಾಕ್ಡೌನ್ ತೆರೆವಿನ ನಂತರ ಆಥಿ೯ಕ ಪುನಶ್ಚೇತನಕ್ಕೆ ಲಿಖಿತ ಸಲಹೆ ನೀಡಿರುವ ವಿರೋಧ ಪಕ್ಷಗಳ ಜೊತೆ ಚರ್ಚಿಸಲು ಮುಂದಾಗದ ಸಕಾ೯ರ ಬೆಂಬಲಿಸಿ ಬೇಕ ?

13) ಎಲ್ಲಾ ದೇಣಿಗೆಯನ್ನು ಪಿಎಂ ಕೇರ್ಸ ನಿಧಿಗೆ ಸ್ವೀಕರಿಸಿ, ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ದೇಣಿಗೆಯನ್ನು ಸಿಎಸ್ಆರ್ ವ್ಯಪ್ತಿಯಿಂದ ಹೊರಗುಳಿಸಿ ರಾಜ್ಯಗಳು ಸಂಪನ್ಮೂಲಗಳ ಕೊರತೆಯಿಂದ ಬಳಲುವಂತೆ ಮಾಡಿ, ರಾಜ್ಯಗಳಿಗೆ ಅಗತ್ಯ ಅನುದಾನವನ್ನು ನೀಡದ ಸಕಾ೯ರ ಬೆಂಬಲಿಸಿ ಬೇಕ ?
14) ಕೋವಿಡ್ ನೆಪದಲ್ಲಿ ಸಾವ೯ಜನಿಕ ಉದ್ದಿಮೆಗಳನ್ನು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಲು ಮುಂದಾಗಿರುವ ಸಕಾ೯ರವನ್ನು ಬೆಂಬಲಿಸಿ ಬೇಕ ? 

15 ) ಲಾಕ್ಡೌನ್ ನಷ್ಟವನ್ನು ಅಂದಾಜಿಸದೆ ಲಾಕ್ಡೌನ್ ಪರಿಹಾರ ಪ್ಯಾಕೆಜ್ ಪ್ರಕಟಿಸುವ , ಪರಿಹಾರ ನೀಡುವಲ್ಲಿ ರಾಜ್ಯಗಳ ನಡುವೆ ತಾರತಮ್ಯ ಮಾಡುವ ಸಕಾ೯ರ ಬೆಂಬಲಿಸ ಬೇಕ ? ಕೋವಿಡ್ ವಿರುದ್ಧ ಹೋರಾಟಕ್ಕೆ ಸಿಪಿಐ(ಎಂ) ಸಂಪೂರ್ಣ ಬೆಂಬಲ ನೀಡಿದೆ. ಪೂವ೯ ಯೋಜನೆಯಿಲ್ಲದೆ ಲಾಕ್ಡೌನ್ ಘೋಷಣೆ ಉಂಟುಮಾಡಿದ ಕಾರಣ ಉಂಟಾದ ಸಂಕಷ್ಟಕ್ಕೆ ಸಕಾ೯ರ ಸ್ಪಂದಿಸಿಲ್ಲ ಎಂಬ ವಿರೋಧ ನಮ್ಮ ಪಕ್ಷದಾಗಿದೆ.


ಕೇರಳದ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಸಕಾ೯ರ ಇಡಿ ದೇಶಕ್ಕೆ ಮಾದರಿಯಾಗಿದೆ. ಅಂತಹ ಕ್ರಮ ಮೆಚ್ಚುಗೆ ಪಡೆಯ ಬೇಕಲ್ಲವೇ?  ಆ ಸಕಾ೯ರಕ್ಕೆ ಕೇಂದ್ರ ಸಮಪ೯ಕ ಹಣಕಾಸು ನೆರವು ನೀಡದಿರುವುದರ ಬಗ್ಗೆಯೂ ಆರ್ ಎಸ್ ಎಸ್ ಅಭಿಪ್ರಾಯ ನೀಡಬೇಕಲ್ಲವೆ ಎಂದು ಕೋರಿದೆ. ಕೋವಿಡ್ ವಿರುದ್ಧದ ಯುದ್ಧದಲ್ಲಿ ಸಕಾ೯ರಕ್ಕೆ ಸಿಪಿಐ(ಎಂ) ಪಕ್ಷವು  ಬೆಂಬಲ ನೀಡಿದೆ. ಇಡೀ ದೇಶವು ಒಂದಾಗಿ ಕೋವಿಡ್ ವಿರುದ್ದ ಹೋರಾಡಿ ಗೆಲುವು ಸಾಧಿಸ ಬೇಕೆಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಈ ಹಿಂದೆಯೆ ಸ್ಪಷ್ಟವಾಗಿ ಹೇಳಿದ್ದಾರೆ.ಆದರೆ ಜನತೆಯ ಸಂಕಷ್ಟಕ್ಕೆ ಸ್ಪಂದಿಸದ ಸಕಾ೯ರದ ವಿಚಾರದಲ್ಲಿ ಸಿಪಿಐ(ಎಂ) ಜನತೆಯೊಂದಿಗೆ ಸದಾ ನಿಲ್ಲುತ್ತದೆ ಎಂದು ಸ್ಪಷ್ಟ ಪಡಿಸುತ್ತ, ಮೇಲಿನ 15 ಪ್ರಶ್ನೆಗಳಿಗೆ ಉತ್ತರ ನೀಡ ಬೇಕೆಂದು ಸಿಪಿಐ(ಎಂ) ಕೋರಿದೆ. 

ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ.


Leave a Reply

Your email address will not be published. Required fields are marked *

error: Content is protected !!