ಉ.ಕೊರಿಯಾದಲ್ಲಿ ಹಸಿವು ತಾಂಡವ- ಆಹಾರಕ್ಕಾಗಿ ಪರದಾಟ

ಸೋಲ್ (ದ.ಕೊರಿಯ), ಜು.2: ಉತ್ತರ ಕೊರಿಯಾದಲ್ಲಿ ಹಸಿವು ತಾಂಡವ ವಾಡುತ್ತಿದ್ದು, ಜನರು ಆಹಾರಕ್ಕಾಗಿ ಪರದಾ ಡುತ್ತಿದ್ದಾರೆ‌ ಎಂಬ ಸುದ್ದಿಯೊಂದು ವರದಿಯಾಗಿದೆ. ವರದಿಗಳ ಪ್ರಕಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳು, ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಚೀನಾದ ಜೊತೆಗಿನ ಗಡಿ ಮುಚ್ಚುಗಡೆ ಹಾಗೂ ಕಳೆದ ವರ್ಷದ ಚಂಡಮಾರುತ, ಭೀಕರ ಮಳೆ ಈ ಎಲ್ಲಾ ಕಾರಣಗಳಿಂದಾಗಿ ಉತ್ತರ ಕೊರಿಯದಲ್ಲಿ ಆಹಾರ ಸಮಸ್ಯೆ ಏರ್ಪಟ್ಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ಏಳು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ತೀವ್ರವಾದ ಹಸಿವಿಗೆ ತುತ್ತಾಗುತ್ತಿದ್ದಾರೆಂದು ಉತ್ತರ ಕೊರಿಯದ ವಿದ್ಯಮಾನಗಳ ವಿಶೇಷ ತಜ್ಜೆಯಾದ ಹಾಝೆಲ್ ಸ್ಮಿತ್ ತಿಳಿಸಿದ್ದಾರೆ. 
ಉತ್ತರ ಕೊರಿಯದಲ್ಲಿ 2020ರಲ್ಲಿ 50.2 ದಶಲಕ್ಷ ಟನ್ ಆಹಾರ ಧಾನ್ಯಗಳ ಅವಶ್ಯಕತೆಯಿತ್ತು. ಆದರೆ ಅದು ಕೇವಲ ನಾಲ್ಕು ದಶಲಕ್ಷ ಟನ್ ಗಳಷ್ಟು ಮಾತ್ರ ಆಹಾರ ಧಾನ್ಯ ಉತ್ಪಾದಿಸಿದ್ದು, 10ಲಕ್ಷ ಟನ್ ಗೂ ಅಧಿಕ ಆಹಾರದ ಕೊರತೆಯುಂಟಾಗಿತ್ತು ಎಂದು ಸಿಯೋಲ್ನಿಂದ ಕಾರ್ಯಾಚರಿಸುತ್ತಿರುವ ಕೊರಿಯನ್ ಅಭಿವೃದ್ಧಿ ಸಂಸ್ಥೆ ತಿಳಿಸಿದೆ. 2020-21ರ ಅವಧಿಯಲ್ಲಿ ಉತ್ತರ ಕೊರಿಯ ಆಮದು ಮಾಡಿಕೊಂಡ ಆಹಾರ ಧಾನ್ಯಗಳ ಪ್ರಮಾಣದಲ್ಲಿ 7.80 ಲಕ್ಷ ಟನ್ ಕೊರತೆಯುಂಟಾಗಿದೆ ಯೆಂದು ಅದು ಹೇಳಿದೆ.

ಇನ್ನು ಉತ್ತರ ಕೊರಿಯದಲ್ಲಿ ಆಹಾರದ ಸಮಸ್ಯೆ ಬಿಗಡಾಯಿಸುತ್ತಿರುವುದಾಗಿ ಉತ್ತರ ಕೊರಿಯದ ಸರ್ವೋಚ್ಚ ನಾಯಕ ಕಿಮ್ ಜೊಂಗ್ ಉನ್ ಅವರು ಜೂನ್ ನಲ್ಲಿ ನಡೆದ ವರ್ಕರ್ಸ್ ಪಾರ್ಟಿ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಕಳೆದ ವರ್ಷದ ಚಂಡಮಾರುತದ ಕಾರಣದಿಂದಾಗಿ ಕೃಷಿ ವಲಯವು ಆಹಾರ ಧಾನ್ಯಗಳ ನಿರೀಕ್ಷಿತ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಉತ್ಪಾದಿಸಲು ವಿಫಲವಾಗಿತ್ತು ಎಂದವರು ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!