ಉಡುಪಿ: ಕೊರೋನಾ ಸೋಂಕಿಗೆ ಬೈಂದೂರಿನ 48 ವರ್ಷದ ವ್ಯಕ್ತಿ ಬಲಿ
ಉಡುಪಿ: ಕೊರೋನಾ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದ್ದು ಮಹಾರಾಷ್ಟ್ರದಿಂದ ಬಂದ ಬೈಂದೂರಿನ 48 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ. ವ್ಯಕ್ತಿ ಶನಿವಾರ ಮುಂಬೈನಿಂದ ತವರಿಗೆ ವಾಪಾಸಾಗಿದ್ದು ಭಾನುವಾರ ತನ್ನ ಮನೆಯಾದ ಕಾಲ್ತೋಡಿನಲ್ಲಿ ಮೃತಪಟ್ಟಿದ್ದರು. ಮೃತ ವ್ಯಕ್ತಿ ಮಹಾರಾಷ್ಟ್ರದಿಂದ ವಾಪಾಸಾಗಿದ್ದರಿಂದ ಅವರ ಗಂಟಲ ದ್ರವ ಪರೀಕ್ಷೆ ಮಾಡಿದ್ದು, ಅದರ ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ಯಕೃತ್, ಮಧುಮೇಹ ಹಾಗೂ ಇತರ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಾಲ್ಕು ದಿನಗಳ ಹಿಂದೆ ಪತ್ನಿ ಹಾಗೂ ಮಗಳೊಂದಿಗೆ ಊರಿಗೆ ಬಂದಿದ್ದರು. ರವಿವಾರ ಅವರು ಕಾಯಿಲೆಯಿಂದ ಮೃತಪಟ್ಟಿದ್ದು, ಬಳಿಕ ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಪಡೆದಾಗ ಇಂದು ಅದು ಪಾಸಿಟಿವ್ ಫಲಿತಾಂಶ ನೀಡಿದೆ. ಇದರೊಂದಿಗೆ ಅವರ ಹೆಂಡತಿ ಮತ್ತು ಮಗಳು ಪಾಸಿಟಿವ್ ಆಗಿದ್ದು, ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. |