ಚೈನಾ ಆಪ್ ನಿಷೇಧಿಸಿದ ಕೇಂದ್ರ ಸರಕಾರದ ಕ್ರಮ ಸ್ವಾಗತಾರ್ಹ: ವೀಣಾ ಶೆಟ್ಟಿ

ಉಡುಪಿ : ದೇಶದ ಆಂತರಿಕ ಸದೃಢತೆಗೆ ಮಾರಕವಾಗಿದ್ದ ಹಾಗೂ ದೇಶದ ಬಹುಪಾಲು ಜನತೆಯ ದಾರಿ ತಪ್ಪಿಸುವ ಸಲುವಾಗಿ ಮನರಂಜನೆಯ ಹೆಸರಿನಲ್ಲಿ ನಾನಾ ರೀತಿಯ ಮುಖವಾಡಗಳನ್ನು ತೊಟ್ಟು ದೇಶದ ಒಳಗೆ ರಾರಾಜಿಸುತ್ತಿದ್ದ 59 ಚೈನಾ ಆಪ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರದ ಕ್ರಮ ಬಹಳ ಅಭಿನಂದನಾರ್ಹ ಎಂದು ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಎಸ್. ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ಜನತೆ ಈಗ ಭಾರತೀಯ ಸಂಸ್ಕೃತಿಯನ್ನು ಮತ್ತು ಸ್ವದೇಶಿಯತೆಯನ್ನು ಮೈಗೂಡಿಸಿಸಲು ಸರಿಯಾದ ದಾರಿ ನಿರ್ಮಾಣವಾಗಿದೆ. ಮೇಕ್ ಇನ್ ಇಂಡಿಯಾ ದಂತಹ ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸ್ವಾವಲಂಬನೆಯ ಬದುಕು ಸಾಗಿಸುವ ಅವಕಾಶ ಈಗ ಬಂದಿದೆ. ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!