ಕಾರ್ಕಳ: ಮನೆಯಲ್ಲಿ ನಡೆಯುತ್ತಿದ ಇಸ್ಪಿಟ್ ಜುಗಾರಿ ಅಡ್ಡೆಗೆ ದಾಳಿ – ಏಳು ಜನರ ಬಂಧನ
ಕಾರ್ಕಳ ಜೂ.29 (ಉಡುಪಿ ಟೈಮ್ಸ್ ವರದಿ): ಕಾರ್ಕಳದ ಕಡ್ತಲ ಕುಂಜಕ್ಯಾರ್ ಮನೆಯಲ್ಲಿ ನಡೆಯುತ್ತಿದ ಇಸ್ಪಿಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಸನ್ನ ಹೆಗ್ಡೆ (53), ರಾಜೇಶ್ ಶೆಟ್ಟಿ (35), ಹರೀಶ್ ಕಾಮತ್ (45), ಸುರೇಂದ್ರ ಶೆಟ್ಟಿ (35), ಮಹೇಶ್ ಶೆಟ್ಟಿ(33), ಸಂತೋಷ್ (38), ಸತೀಶ್ ಹೆಗ್ಡೆ (40) ಬಂಧಿತ ಆರೋಪಿಗಳು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಜೆಕಾರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುದರ್ಶನ್ ದೊಡ್ಡಮನಿ ಅವರು ಇತರ ಸಿಬ್ಬಂದಿಗಳೊಂದಿಗೆ ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕುಂಜಕ್ಯಾರ್ ಪ್ರಸನ್ನ ಹೆಗ್ಡೆಯವರ ಮನೆಗೆ ತೆರಳಿ ನೋಡಿದಾಗ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪಿಟು ಜುಗಾರಿ ಆಟ ನಡೆಸುತ್ತಿರುವುದು ಕಂಡು ಬಂದಿದೆ.
ಈ ವೇಳೆ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿ ಇಸ್ಪೀಟ್ಆಟಕ್ಕೆ ಬಳಸಿದ ಒಟ್ಟು 11,420 ರೂ ನಗದು, 52 ಇಸ್ಪೀಟ್ ಎಲೆಗಳು, ಹಳೆಯ ಪ್ಲಾಸ್ಟಿಕ್ ಗೋಣಿ ಚೀಲವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.