ಜುಲೈ 7 ರಿಂದ ದುಬೈ- ಭಾರತ ನಡುವಣ ಎಮಿರೇಟ್ಸ್ ವಿಮಾನಯಾನ ಪುನಾರಂಭ?
ದುಬೈ: ದುಬೈ-ಭಾರತ ನಡುವಿನ ಸೇವೆಗಳನ್ನು ಜುಲೈ 7 ರಿಂದ ಪುನಾರಂಭಗೊಳಿಸುವ ಸಾಧ್ಯತೆ ಇದೆ. ಕೊರೋನಾ ಪ್ರಕರಣಗಳು ಭಾರತದಲ್ಲಿ ಏರಿಕೆಯಾಗುತ್ತಿದ್ದರಿಂದ ಯುಎಇ ಕಳೆದ ಎರಡು ತಿಂಗಳಿನಿಂದ ಭಾರತಕ್ಕೆ ಸಂಚರಿಸುತ್ತಿದ್ದ ವಿಮಾನ ಸೇವೆಗಳನ್ನು ದುಬೈನ ವಿಮಾನ ಸೇಗೆಳ ಸಂಸ್ಥೆ ಎಮಿರೇಟ್ಸ್ ಸ್ಥಗಿತಗೊಳಿಸಿತ್ತು.
ಅಲ್ಲಿನ ರಾಷ್ಟ್ರೀಯ ಪತ್ರಿಕೆಯ ವರದಿಯ ಪ್ರಕಾರ ಎಮಿರೇಟ್ಸ್ ವಿಮಾನ ಸಂಸ್ಥೆ ಭಾರತ ಸರ್ಕಾರದಿಂದ ನಿರ್ದಿಷ್ಟ ಪ್ರಯಾಣ ಶಿಷ್ಟಾಚಾರ ಪ್ರಕಟವಾಗುವುದನ್ನು ಎದುರು ನೋಡುತ್ತಿದೆ ಎಂದು ತಿಳಿದುಬಂದಿದೆ.
ಭಾರತಕ್ಕೆ ವಿಮಾನ ಸಂಚಾರವನ್ನು ಜುಲೈ 7 ರಿಂದ ಪ್ರಾರಂಭಿಸಲು ನಿರೀಕ್ಷಿಸುತ್ತಿದ್ದು, ಸರ್ಕಾರ ಪ್ರಕಟಿಸುವ ಸಂಚಾರ ಶಿಷ್ಟಾಚಾರ ಗಳನ್ನು ಕಾಯುತ್ತಿದ್ದೇವೆ ಹೆಚ್ಚಿನ ವಿವರಗಳನ್ನು ಶೀಘ್ರವೇ ಹಂಚಿಕೊಳ್ಳಲಿದ್ದೇವೆ” ಎಂದು ಟ್ವಿಟರ್ ಖಾತೆಯ ಮೂಲಕ ಎಮಿರೇಟ್ಸ್ ತಿಳಿಸಿದೆ. ಏರ್ ಲೈನ್ಸ್ ನ ವೆಬ್ ಸೈಟ್ ಸಹ ಜು.7 ರಿಂದ ಬುಕಿಂಗ್ ಪ್ರಾರಂಭವಾಗಲಿದೆ ಎಂಬುದನ್ನು ತೋರಿಸುತ್ತಿದೆ.