ಕಾರ್ಕಳ: ವಾಕಿಂಗ್‌ಗೆ ಹೋದವರ ಮೃತ ದೇಹ ಕೆರೆಯಲ್ಲಿ ಪತ್ತೆ

ಕಾರ್ಕಳ ಜೂ.28(ಉಡುಪಿ ಟೈಮ್ಸ್ ವರದಿ): ಕೆರೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ. 

ಸಿಲ್ವೆಸ್ಟರ್ ಮಸ್ಕರೇನಸ್‌ (54) ಆತ್ಮಹತ್ಯೆ ಮಾಡಿಕೊಂಡವರು. ಇವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ವೈದ್ಯರು ಸಲಹೆಯಂತೆ ಔಷಧಿ ಪಡೆಯುತ್ತಿದ್ದರು. ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್‌ ಹೋಗುವ ಅಭ್ಯಾಸ ಹೊಂದಿದ್ದ ಅವರು ಜೂ.27 ರಂದು ಎಂದಿನಂತೆ ವಾಕಿಂಗ್‌ಗೆ ಹೋದವರು ಮನೆಗೆ ವಾಪಸ್ಸು ಬಂದಿರುವುದಿಲ್ಲ. ಈ ವೇಳೆ ಹುಡುಕಾಟ ನಡೆಸಿದಾಗ ಮನೆ ಬಳಿ ಇರುವ ಕಾಡಿನಲ್ಲಿ ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ನಿರ್ಮಾಣ ಮಾಡಿದ್ದ ದೊಡ್ಡ ಕೆರೆಯಲ್ಲಿ ಸಂಜೆ ವೇಳೆಗೆ ಅವರ ಮೃತ ದೇಹ ಪತ್ತೆಯಾಗಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ಮಾನಸಿಕವಾಗಿ ಜೀವನದಲ್ಲಿ ನೊಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!