ಯಾರಿಗೂ ಬೇಡವಾದರೆ ದೈವ, ದೇವರುಗಳು…

ಭಕ್ತಾದಿಗಳು ಸರಕಾರದ ಆದೇಶದಂತೆ ನಮ್ಮ ದೈವ ಸ್ಥಾನ ದೇವಸ್ಥಾನಗಳಿಗೆ ಬಾಗಿಲನ್ನು ಹಾಕಿ ಇದೀಗ ಎರಡು ತಿಂಗಳುಗಳ ಸಮೀಪ ಆಗಿದೆ ಕೋವಿಡ್ 19 ರ ನಿಯಮದಂತೆ ನಿಯಮಿತ ಅವಧಿಗೆ ಇದೀಗ ಒಂದೊಂದೇ ಅಂಗಡಿ-ಮುಂಗಟ್ಟುಗಳು ಪ್ರಾರಂಭ ಆದರೂ ಕೂಡ ನಮ್ಮಗಳ ನಂಬಿಕೆಯ ಪ್ರತೀಕವಾದ ದೈವಸ್ಥಾನ ಮತ್ತು ದೇವಸ್ಥಾನಗಳಿಗೆ ಇದುವರೆಗೆ ಪ್ರವೇಶಕ್ಕೆ ಅವಕಾಶ ನೀಡಿರುವುದಿಲ್ಲ ಸರಕಾರಕ್ಕೆ ಆದಾಯ ತರುವ ಮದ್ಯದಂಗಡಿಗಳನ್ನು ತೆರೆಯಲು ತೋರಿದ ಕಾಳಜಿಯನ್ನು ಹೆಚ್ಚಿನ ಆದಾಯಗಳನ್ನು ತಂದುಕೊಡುತ್ತಿರುವ ನಮ್ಮ ದೇವಸ್ಥಾನಗಳನ್ನು ತೆರೆಯಲು ಇದುವರೆಗೆ ಯಾರೊಬ್ಬರೂ ಮನ ಮಾಡದಿರುವುದು ಬೇಸರದ ಸಂಗತಿ.

ಆಸ್ತಿಕರ ಭಾವನೆಗಳಿಗೆ ಧಕ್ಕೆಯಾಗುವ ಈ ನಿರ್ಣಯವು ಬದಲಾಗುವುದು ಯಾವಾಗ ಎಲ್ಲಾ ವೃತ್ತಿಯವರು ಎಲ್ಲಾ ವ್ಯವಹಾರಸ್ಥರು ತಮಗಾದ ನೋವಿನ ಬಗ್ಗೆ ಪ್ರತಿಭಟಿಸುತ್ತಿದ್ದರು ಕೂಡ ಇದುವರೆಗೂ ಯಾವುದೇ ಭಕ್ತರು ದೇವಸ್ಥಾನಗಳ ಬಾಗಿಲು ತೆಗೆಯದ ಕುರಿತು ಇದುವರೆಗೆ ಧ್ವನಿಯೆತ್ತಿದ ಉದಾಹರಣೆಗಳೇ ಕಾಣುತ್ತಿಲ್ಲ.

ಯಾವುದೇ ಹಿಂದೂಪರ ಸಂಘಟನೆಗಳು ದೇವಸ್ಥಾನದ ಬಾಗಿಲನ್ನು ತೆಗೆಯುವ ಕುರಿತು ಇದುವರೆಗೆ ಒಂದೇ ಒಂದು ಹೇಳಿಕೆಯನ್ನು ನೀಡಿದ್ದು ಕಂಡುಬರುತ್ತಿಲ್ಲ. ಹಿಂದುತ್ವದ ಅಲೆಯಲ್ಲಿ ರಚಿಸಿದ ಸರಕಾರದ ಮಾನ್ಯ ಮುಖ್ಯಮಂತ್ರಿಗಳು ಧಾರ್ಮಿಕ ಭಾವನೆ ಉಳ್ಳ ನಮ್ಮೂರಿನ ಮುಜರಾಯಿ ಸಚಿವರು ಈ ಕುರಿತು ಒಂದೇ ಒಂದು ಹೇಳಿಕೆಯನ್ನು ಇದುವರೆಗೆ ನೀಡಿರುವುದಿಲ್ಲ. ಎಲ್ಲಾ ವ್ಯಾಪಾರಗಳಿಗೆ ನೀಡಿದ ನಿಯಮ ಮತ್ತು ಕೋವಿಡ್ ನಿಯಮವನ್ನು ಪಾಲಿಸಿಕೊಂಡು ದೇವಸ್ಥಾನದಲ್ಲಿ ಪೂಜೆ ಪುರಸ್ಕಾರ ಗಳಲ್ಲಿ ಭಕ್ತಾದಿಗಳಿಗೆ ಭಾಗವಹಿಸಲುಅವಕಾಶವನ್ನು ನೀಡಿದರೆ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಟ್ಟಂತಾಗುತ್ತದೆ. ಸಮಯದ ನಿಗದಿಯನ್ನು ಮಾಡಿ ನಿರ್ದಿಷ್ಟ ಭಕ್ತಾದಿಗಳಿಗೆ ಅವಕಾಶವನ್ನು ನೀಡಿ ದೇವಸ್ಥಾನಗಳ ಬಾಗಿಲನ್ನು ತೆರೆಯುವ ಮೂಲಕ ದೈವ-ದೇವರುಗಳ ಕೃಪೆಗೆ ಘನ ಸರಕಾರ ಪಾತ್ರವಾಗಲೀ ಈ ಮೂಲಕ ದೈವ ದೇವರುಗಳನ್ನು ನಂಬಿರುವ ಸಮಾಜದ ಭಕ್ತಾದಿಗಳನ್ನು ಸಂತೋಷ ಗಳಿಸುವ ಈ ಮೂಲಕ ಸರಕಾರಕ್ಕೆ ಆದಾಯವನ್ನು ಕೊಡಿಸುವ ಮಹತ್ಕಾರ್ಯವನ್ನು ಸರಕಾರ ಕೈಗೊಳ್ಳಲಿ.

ಕಷ್ಟದ ಸಂದರ್ಭಗಳಲ್ಲಿ ದೇವರುಗಳನ್ನು ನೆನೆಯುವುದು ಸಮಾಜದ ವಾಡಿಕೆ ಆದರೆ ದೇವಸ್ಥಾನಗಳಿಗೆ ಬಾಗಿಲನ್ನು ಹಾಕಿ ಮದ್ಯದಂಗಡಿಗಳ ಬಾಗಿಲನ್ನು ತೆರೆಯುವ ಮೂಲಕ ಸಮಾಜಕ್ಕೆ ಏನನ್ನ ಹೇಳಲು ಹೊರಟಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ದೇವರುಗಳ ಶಾಪಕ್ಕೆ ಗುರಿ ಯಾವುದರ ಕಿಂತ ಮುಂಚೆ ಎಚ್ಚೆತ್ತು ಈ ಕೂಡಲೇ ದೇವಸ್ಥಾನಗಳ ಬಾಗಿಲನ್ನು ತೆರೆಯುವ ಮೂಲಕ ಭಕ್ತರುಗಳ ಭಾವನೆಗೆ ಬೆಲೆ ನೀಡುವಂತೆ ಹಾಗೂ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಿ ಸರಕಾರದಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.
ರೋಶನ್ ಶೆಟ್ಟಿಅಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ

Leave a Reply

Your email address will not be published. Required fields are marked *

error: Content is protected !!