ಉಡುಪಿ ಧರ್ಮಪ್ರಾಂತ್ಯದ ಯುವ ನಿರ್ದೇಶಕರಾಗಿ ವಂ|ಚಾರ್ಲ್ಸ್ ಮಿನೇಜಸ್ ನೇಮಕ

ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಯುವ ಆಯೋಗದ ನೂತನ ಕಾರ್ಯದರ್ಶಿ ಮತ್ತು ಭಾರತೀಯ ಕೆಥೊಲಿಕ್ ಯುವ ಸಂಘಟನೆಯ ನಿರ್ದೇಶಕರಾಗಿ ವಂ|ಚಾರ್ಲ್ಸ್ ಮಿನೇಜಸ್ ಅವರನ್ನು ನೇಮಕಗೊಳಿಸಿ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ.

ಧರ್ಮಪ್ರಾಂತ್ಯದ ಯುವ ಆಯೋಗದ ನೂತನ ಕಾರ್ಯದರ್ಶಿ ಮತ್ತು ಭಾರತೀಯ ಕೆಥೊಲಿಕ್ ಯುವ ಸಂಘಟನೆಯ ನಿರ್ದೇಶಕರಾಗಿ ವಂ|ಚಾರ್ಲ್ಸ್ ಮಿನೇಜಸ್ ಅವರು ಸೋಮವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಅಧಿಕಾರ ವಹಿಸಿಕೊಂಡರು.
ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ನಿರ್ದೇಶಕರಿಗೆ ಅಧಿಕಾರ ಸ್ವೀಕಾರದ ಪ್ರಮಾಣ ವಚನವನ್ನು ಭೋಧಿಸಿದರು. ನಿರ್ಗಮನ ನಿರ್ದೇಶಕ ಹಾಗೂ ಪ್ರಸ್ತುತ ವೈಸಿಎಸ್ ಸಂಘಟನೆಯ ಚಾಪ್ಲೆಯ್ನ್ ವಂ|ಎಡ್ವಿನ್ ಡಿಸೋಜಾ ಅವರು ನೂತನ ನಿರ್ದೇಶಕರಿಗೆ ಸಂಘಟನೆಯ ದಾಖಲೆಗಳನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ವಂ|ಚಾರ್ಲ್ಸ್ ಮಿನೇಜಸ್ ಮೂಲತಃ ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಧರ್ಮ ಕೇಂದ್ರಕ್ಕೆ ಸೇರಿದವರಾಗಿದ್ದು1991ರಲ್ಲಿ ಧರ್ಮಗುರು ವಾಗಿ ದೀಕ್ಷೆ ಪಡೆದರು. ಬಳಿಕ ಆಗ್ರಾರ್, ಕುಲಶೇಖರ ಮತ್ತು ವಿಟ್ಲ ಧರ್ಮಕೇಂದ್ರಗಳಲ್ಲಿ ಸಹಾಯಕ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದಾರೆ. 1997-2005 ರ ವರೆಗೆ ಮಂಗಳೂರು ಧರ್ಮಪ್ರಾಂತ್ಯದ ವೈಸಿಎಸ್ ಮತ್ತು ವೈಎಸ್ ಎಮ್ ಸಂಘಟನೆಯ ನಿರ್ದೇಶಕ ರಾಗಿ ಸೇವೆ ಸಲ್ಲಿಸಿದರು. ಬಳಿಕ 5 ವರ್ಷ ನೀರು ಮಾರ್ಗ ಧರ್ಮಕೇಂದ್ರದ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು, ಬಳಿಕ 2010-15 ರ ವರೆಗೆ. ಧರ್ಮಪ್ರಾಂತ್ಯದ ವೈಸಿಎಸ್ ಮತ್ತು ವೈಎಸ್ ಎಮ್ ಸಂಘಟನೆಯ ರಾಷ್ಟ್ರೀಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2015 ರಲ್ಲಿ ಐವೈಸಿಎಸ್ ಸಂಘಟನೆ ಅಂತರಾಷ್ಟ್ರೀಯ ಚಾಪ್ಲೆಯ್ನ್ ಆಗಿ ನೇಮಕಗೊಂಡು 2019 ರ ವರೆಗೆ ಸೇವೆ ಸಲ್ಲಿಸಿದರು. ಪ್ರಸ್ತುತ ಅವರು ಉಡುಪಿ ಶೋಕ ಮಾತಾ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!