ಉಗ್ರರ ದಾಳಿ- ಪೊಲೀಸ್ ವಿಶೇಷಾಧಿಕಾರಿ ಮನೆಗೆ ನುಗ್ಗಿ ಅಧಿಕಾರಿ ಮತ್ತು ಪತ್ನಿಯ ಹತ್ಯೆ

ಶ್ರೀನಗರ ಜೂ.28: ಉಗ್ರರ ತಂಡವೊಂದು ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ನುಗ್ಗಿ ಅಧಿಕಾರಿ ಮತ್ತು ಅವರ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ನಿನ್ನೆ ರಾತ್ರಿ ನಡೆದಿದೆ.ಆವಂತಿಪೋರಾದ ಹರಿಪರಿಗಂ ನಿವಾಸಿಯಾದ ಫಯಾಜ್ ಅಹಮದ್ ಮತ್ತು ಅವರ ಪತ್ನಿ ರಜಾ ಬೇಗಮ್ ಹತ್ಯೆಯಾದವರು. ಘಟನೆಯಲ್ಲಿ ಅಧಿಕಾರಿಯ ಮಗಳು ರಫಿಯಾ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಡ್ರೋನ್‌ ಮೂಲಕ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಪುಲ್ವಾಮಾದಲ್ಲಿ ಉಗ್ರರ ಚಟುವಟಿಕೆ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಫಯಾಜ್ ಅಹಮದ್ ಅವರ ಮನೆಗೆ ನುಗ್ಗಿದ ಭಯೋತ್ಪಾದಕರು ಮನಬಂದಂತೆ  ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಫಯಾಜ್ ಅಹಮದ್ ಮತ್ತು ಅವರ ಪತ್ನಿ ರಜಾ ಬೇಗಮ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಭದ್ರತಾಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಉಗ್ರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. 

Leave a Reply

Your email address will not be published. Required fields are marked *

error: Content is protected !!