ಉಡುಪಿ: ಜಿಲ್ಲೆಯಾದ್ಯಂತ ನಾಳೆ (ಜೂ.28) ಪದವಿ ಕಾಲೇಜ್ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ
ಉಡುಪಿ ಜೂ.27(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಾದ್ಯಂತ ಶೀಘ್ರದಲ್ಲಿ ಕಾಲೇಜುಗಳು ಆರಂಭವಾಗಲಿರುವುದರಿಂದ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಬೋದಕ ಬೋದಕೇತರ ಸಿಬ್ಬಂದಿಗಳಿಗೆ ಲಸಿಕಾ ಅಭಿಯಾನ ಆರಂಭಗೊಂಡಿದೆ. ಅದರಂತೆ ಜಿಲ್ಲೆಯಾದ್ಯಂತ ನಾಳೆ 6000 ಡೋಸ್ ಕೋವಿಡ್ ಲಸಿಕೆಯನ್ನು ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು,
ಈ ಪೈಕಿ ತೆಂಕನಿಡಿಯೂರು ಕಾಲೇಜಿನಲ್ಲಿ 700 ಡೋಸ್, ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ 500 ಡೋಸ್, ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನಲ್ಲಿ 250, ಮಣಿಪಾಲ ಮಾಧವ ಪೈ ಕಾಲೇಜಿನಲ್ಲಿ 150, ಹೆಬ್ರಿ ಸರಕಾರಿ ಪದವಿ ಕಾಲೇಜಿನಲ್ಲಿ 200 ಡೋಸ್, ಸರಕಾರಿ ಪದವಿ ಕಾಲೇಜು ಮುನಿಯಾಲ್ 130 ಡೋಸ್, ಕುಂದಾಪುರ ಭಂಡಾರ್‌ಕಾರ್ ಕಾಲೇಜಿನಲ್ಲಿ 500 ಡೋಸ್, ಬಿ.ಬಿ, ಹೆಗ್ಡೆ ಕಾಲೇಜಿನಲ್ಲಿ 200 ಡೋಸ್, ಗಂಗೊಳ್ಳಿ ತೌಹೀದ್ ಕಾಲೇಜಿನಲ್ಲಿ 50 ಡೋಸ್, ಕೋಟೇಶ್ವರ ಕಲವರ ವರದರಾಜ್ ಎಂ.ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 200 ಡೋಸ್, ಮರವಂತೆ ಆರ್‌ಎಎಂಸಿ ಕಾಲೇಜಿನಲ್ಲಿ 200 ಡೋಸ್, ಶಂಕರ ನಾರಾಯಣ ಪದವಿ ಕಾಲೇಜು 300 ಡೋಸ್, ಬೈಂದೂರು ಕಾಲೇಜಿನಲ್ಲಿ 300 ಡೋಸ್, ಬಸ್ರೂರು ಶಾರದ ಕಾಲೇಜಿನಲ್ಲಿ 200, ಕಾರ್ಕಳ ಭುವನೇಂದ್ರ ಕಾಲೇಜು100 ಡೋಸ್ ಕೋವಿಶೀಲ್ಡ್ ಸೇರಿದಂತೆ ಜಿಲ್ಲೆಯಾದ್ಯಂತ 6000 ಕೋವಿಡ್ ಲಸಿಕೆ ವಿತರಿಸಲಾಗುತ್ತದೆ ಎಂದು ತಿಳಿದು ಬಂದಿದೆ.