ಜಮ್ಮು ವಾಯುಪಡೆ ನಿಲ್ದಾಣ ಸ್ಫೋಟ-ಪಂಜಾಬ್‌’ನ ಪಠಾಣ್‌ಕೋಟ್‌’ನಲ್ಲಿಹೈ ಅಲರ್ಟ್

ಚಂಡೀಗಢ: ಜಮ್ಮು ವಿಮಾನ ನಿಲ್ದಾಣದಲ್ಲಿರುವ ಉನ್ನತ ಭದ್ರತೆಯ ಭಾರತೀಯ ವಾಯುಪಡೆಯ ನಿಲ್ದಾಣಕ್ಕೆ 2 ಸ್ಫೋಟಕ ತುಂಬಿದ ಡ್ರೋನ್‌ ದಾಳಿ ಎಚ್ಚರಿಕೆಯ ಗಂಟೆಯಾಗಿದ್ದು ಪಂಜಾಬ್‌ನ ಗಡಿ ಜಿಲ್ಲೆಯಾದ ಪಠಾಣ್‌ಕೋಟ್‌ನಲ್ಲಿ ಭದ್ರತೆ ಹೆಚ್ಚಿಸ ಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಠಾಣ್‌ಕೋಟ್‌ನ ಪ್ರಮುಖ ಕೇಂದ್ರಗಳ ಬಳಿ ಹೆಚ್ಚಿನ ನಿಗವಹಿಸಲಾಗಿದೆ. 5 ವರ್ಷಗಳ ಹಿಂದೆ ಪಠಾಣ್‌ಕೋಟ್ ವಾಯುಪಡೆಯ ನೆಲೆ ಭಯೋತ್ಪಾದಕ ದಾಳಿಗೆ ಒಳಗಾಗಿತ್ತು. ಪಠಾಣ್‌ಕೋಟ್ ಮತ್ತು ಸುತ್ತಮುತ್ತಲಿನ ಸೂಕ್ಷ್ಮ ಪ್ರದೇಶಗಳ ಬಳಿ ಪೆಟ್ರೋಲಿಂಗ್ ಬಲಪಡಿಸಲಾಗಿದೆ ಮತ್ತು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು ಘಟನೆ ಬಳಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಭದ್ರತೆಯಲ್ಲಿದ್ದೇವೆ. ಈ ರೀತಿಯ ಘಟನೆ ನಡೆದಾಗಲೆಲ್ಲಾ ನೆರೆಹೊರೆಯ ಪ್ರದೇಶಗಳಲ್ಲಿ ಗರಿಷ್ಠ ಎಚ್ಚರಿಕೆ ನೀಡಲಾಗುತ್ತದೆ ಎಂದು ಪಠಾಣ್‌ಕೋಟ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುರೇಂದ್ರ ಲಾಂಬಾ ತಿಳಿಸಿದ್ದಾರೆ.

ನಾವು ನಮ್ಮ ಅಂತಾರಾಷ್ಟ್ರೀಯ ಗಡಿಯಲ್ಲಿನ ಓಡಾಟಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದೇವೆ. ಇದಕ್ಕಾಗಿ ಹೆಚ್ಚುವರಿ ಪಡೆಗಳನ್ನು ಸಹ ನಿಯೋಜಿಸಿದ್ದೇವೆ. ವಿಶೇಷ ಕಮಾಂಡೋಗಳು ಮತ್ತು ಪಂಜಾಬ್ ಪೊಲೀಸರ SWAT ತಂಡಗಳನ್ನು ಕಾರ್ಯತಂತ್ರವಾಗಿ ನಿಯೋಜಿಸಲಾಗುತ್ತಿದೆ ಎಂದರು. 

ಜಮ್ಮುಗೆ ತೆರಳುವ ಮತ್ತು ಜಮ್ಮು ಕಾಶ್ಮೀರಕ್ಕೆ ಕಡೆಯಿಂದ ಪಠಾಣ್‌ಕೋಟ್‌ಗೆ ಪ್ರವೇಶಿಸುವ ವಾಹನಗಳ ತಪಾಸಣೆ ತೀವ್ರಗೊಂಡಿದೆ ಎಂದು ಲಾಂಬಾ ತಿಳಿಸಿದ್ದಾರೆ.

ಭಾನುವಾರ ಮುಂಜಾನೆ ಜಮ್ಮು ವಿಮಾನ ನಿಲ್ದಾಣದಲ್ಲಿರುವ ವಾಯುಪಡೆಯ ನಿಲ್ದಾಣದಲ್ಲಿ ಡ್ರೋನ್‌ನಿಂದ ದಾಳಿ ನಡೆಸ ಲಾಗಿತ್ತು. ಮೊದಲ ಸ್ಫೋಟ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದ ಮೊದಲ ಅಂತಸ್ತಿನ ಕಟ್ಟಡದ ಮೇಲೆ ಬಿದ್ದು ಛಾವಣಿ ಧ್ವಂಸಗೊಂಡಿದೆ.ಎರಡನೆಯದು ನೆಲದ ಮೇಲೆ ಬಿದ್ದಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!