ಹೆಜಮಾಡಿ ಟೋಲ್’ಗೇಟ್’ನಲ್ಲಿ ಟ್ರಕ್ ಚಾಲಕನಿಗೆ ಹಲ್ಲೆ- ವಿಡಿಯೋ ವೈರಲ್ ಸಾರ್ವಜನಿಕರ ಆಕ್ರೋಶ
ಉಡುಪಿ, ಜೂ. 27: ಟ್ರಕ್ ಚಾಲಕನೋರ್ವನಿಗೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಅಲ್ಲಿನ ಸಿಬಂದಿಯೇ ಸೇರಿ ಹಲ್ಲೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಸಿಬ್ಬಂದಿಗಳು ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸೈಕಲ್ ಸವಾರನೋರ್ವ ಮೊಬೈಲಿನಲ್ಲಿ ಚಿತ್ರೀಕರಿಸಿ, ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆದರೆ ಯಾರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ತಿಳಿದುಬಂದಿಲ್ಲ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಆತ ಇಂಗ್ಲಿಷ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು. ನಾನು ಸೈಕಲ್ ನಲ್ಲಿ ಸಾಗುತ್ತಿದ್ದಾಗ, ಟೋಲ್ ಸಿಬ್ಬಂದಿ ಲಾರಿ ಚಾಲಕನಿಗೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಮೊಬೈಲಿನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದೇನೆ. ಆದರೆ, ಅಲ್ಲಿನ ಸಿಬಂದಿ ನನ್ನನ್ನು ಪ್ರಶ್ನೆ ಮಾಡಿದ್ದಲ್ಲದೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ವಿಡಿಯೋ ಡಿಲೀಟ್ ಮಾಡುವಂತೆ ಹೇಳಿ ಬೆದರಿಕೆ ಕೂಡ ಹಾಕಿದ್ದಾರೆ. ಇಲ್ಲದಿದ್ದರೆ ಸೈಕಲ್ ಕೊಡುವುದಿಲ್ಲ ಎಂದು ಹೇಳಿ, ಸೈಕಲನ್ನು ತೆಗೆದಿಟ್ಟಿದ್ದರು. ಅಲ್ಲದೆ, ಅಲ್ಲಿಯೇ ಸ್ವಲ್ಪ ದೂರದಲ್ಲಿ ಹೊಯ್ಸಳ ಪೊಲೀಸರು ನಿಂತುಕೊಂಡಿದ್ದರು. ನಮ್ಮ ಜಗಳವನ್ನು ನೋಡಿ, ಪೊಲೀಸರು ಅಲ್ಲಿಗೆ ಬಂದಿದ್ದು ನಾನು ಅವರಿಗೆ ಘಟನೆಯನ್ನು ವಿವರಿಸಿದ್ದೇನೆ. ಅಲ್ಲದೆ, ನಾನೊಬ್ಬ ಮಾಧ್ಯಮದ ವ್ಯಕ್ತಿಯೆಂದು ಹೇಳಿದರೂ, ಪೊಲೀಸರು ಸಹಾಯಕ್ಕೆ ಬರಲಿಲ್ಲ. ಪೊಲೀಸರ ಎದುರಲ್ಲೇ ನನಗೆ ಟೋಲ್ ಸಿಬಂದಿ, ನೀನು ಎಲ್ಲಿ ಬೇಕಾದ್ರೂ ಕಂಪ್ಲೇಂಟ್ ಮಾಡು. ಏನೂ ಆಗುವುದಿಲ್ಲ ಎಂದು ಆವಾಜ್ ಹಾಕಿದ್ದಾಗಿ ಬರೆದುಕೊಂಡಿದ್ದಾರೆ. ಇದರೊಂದಿಗೆ, ಟೋಲ್ ಸಿಬಂದಿ ಯಾರು ಕೂಡ ಮಾಸ್ಕ್ ಧರಿಸಿರಲಿಲ್ಲ. ಉಡುಪಿ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಜರುಗಿಸುತ್ತಾರೆಯೇ ಎಂದು ಪ್ರಶ್ನೆ ಮಾಡಿ ಬರೆದುಕೊಂಡಿದ್ದಾರೆ.
I want adavataise