ಸಾಮಾಜಿಕ ಕಾರ್ಯಕರ್ತೆಗೆ ವರ ಬೇಕಂತೆ ಆದ್ರೆ ಕಂಡಿಷನ್ ಏನು ಗೊತ್ತಾ…?

ದೆಹಲಿ ಜೂ.26: ಮದುವೆ ವಿಚಾರದಲ್ಲಿ ಕೆಲವೊಂದು ಷರತ್ತುಗಳನ್ನು ವಿಧಿಸುವುದು ವಿಶೇಷ ವೇನಲ್ಲ. ಆದರೆ ಇಲ್ಲೊಬ್ಬರು ಯುವತಿ ತಮ್ಮ ಮದುವೆಗೆ ಹಾಕಿರುವ ಕಂಡಿಶನ್ ಎಲ್ಲೆಡೆ ವೈರಲ್ ಆಗಿದೆ. ಅಲ್ಲದೆ ಯುವತಿಯನ್ನು ನೆಟ್ಟಿಗರು ಸಕತ್ ಕಾಳೆಲೆದಿದ್ದಾರೆ.

ಈಗಿನ ಆಧುನಿಕ ಕಾಲದಲ್ಲಿ ಯುವತಿಯರು ಮಾತ್ರ ಅಲ್ಲ ಯುವಕರೂ ತಮ್ಮ ಬಾಳ ಸಂಗಾತಿಯ ವಿಚಾರದಲ್ಲಿ ಕಂಡೀಶನ್ ಕಾಕುವುದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ‌ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರ ಬೇಕಾಗಿದ್ದಾರೆ ಎಂಬ ಜಾಹಿರಾತು ಇದೀಗ ಭಾರೀ ವೈರಲ್​ ಆಗಿದೆ. 

30 ವರ್ಷ ದಾಟಿದ ಸ್ತ್ರೀಯೊಬ್ಬರು. ಇಂಗ್ಲಿಷ್​​ ಸುದ್ದಿಪತ್ರಿಕೆಯೊಂದರಲ್ಲಿ ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡಿದ್ದಾರೆ. ಈ ಜಾಹಿರಾತಿ​​​ನಲ್ಲಿ 25ರಿಂದ 28ವರ್ಷದೊಳಗಿನ ವರ ಬೇಕು. ತಾನು ಗಿಡ್ಡ ತಲೆಗೂದಲಿನ, ಸಾಮಾಜಿಕ ಕಾರ್ಯಕರ್ತೆ ಆಗಿದ್ದು ಸೂಕ್ತ ವರ ಬೇಕಾಗಿದ್ದಾರೆ. ಒಳ್ಳೆಯ ಮನೆ ಇರಬೇಕು. ತಂದೆ-ತಾಯಿಗೆ ಅವನು ಒಬ್ಬನೇ ಮಗನಾಗಿರಬೇಕು. ಕನಿಷ್ಠ 20 ಎಕರೆ ಜಾಗ, ತೋಟದ ಮನೆ ಇರಬೇಕು. ಉದ್ಯಮಿಯಾಗಿದ್ದು, ಅಡುಗೆ ಮಾಡಲು ಬಲ್ಲವನಾಗಿರಬೇಕು ಎಂದು ತಿಳಿಸಲಾಗಿದೆ.  ಇದಿಷ್ಟೇ ಅಲ್ಲದೆ ಊಟ ಮಾಡಿದ ಬಳಿಕ ತೇಗಬಾರದು, ಹೂಸು ಬಿಡಬಾರದು ಅಂತ ಕಂಡಿಷನ್​​ ಹಾಕಿದ್ದಾರೆ.

ಈ ಎಲ್ಲಾ ಕಂಡಿಷನ್ಸ್​​ಗೆ ಓಕೆ ಆದರೆ ಇಮೇಲ್​ ವಿಳಾಸಕ್ಕೆ ವಿವರ ಕಳುಹಿಸಿ ಎಂದೂ ತಿಳಿಸಿದ್ದಾರೆ. ಇನ್ನು ಈ ಜಾಹಿರಾತಿಗೆ ಇವರು  13,000 ರೂ. ಖರ್ಚು ಮಾಡಿದ್ದಾರಂತೆ. ಇದೀಗ ಈ ಜಾಹಿರಾತು ಎಲ್ಲೆಡೆ ವೈರಲ್ ಆಗಿದ್ದು, ಜಾಹೀರಾತಿನಲ್ಲಿ ಮಹಿಳೆ ಇಮೇಲ್​​ ಐಡಿ ಇದ್ದು ಸಾಕಷ್ಟು ಜನ ಮೇಲ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡ ಸ್ವಾರ್ಥಿ ನೀನು ಎಂದು ಜಡಾಸಿದ್ದಾರಂತೆ. ಜೊತೆಗೆ ನೀನು ಉಂಡ ಬಳಿಕ ತೇಗುವುದೇ ಇಲ್ವಾ, ಯಾವತ್ತೂ ಹೂಸು ಬಿಟ್ಟೇ ಇಲ್ವಾ ಎಂದು ಕಾಲೆಳೆದಿದ್ದಾರಂತೆ. ಪತ್ರಿಕೆ ಜಾಹೀರಾತು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು. ಭಾರೀ ಟ್ರೋಲ್ ಕೂಡಾ ಆಗಿದೆ.

Leave a Reply

Your email address will not be published. Required fields are marked *

error: Content is protected !!