ಉಡುಪಿ: ಕೋಟ್ಯಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶ ಮಾಡಿದ ಪೊಲೀಸರು
ಉಡುಪಿ ಜೂ.26(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಲ್ಲಿ ಅರೋಪಿಗಳಿಂದ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಇಂದು ನಾಶ ಮಾಡಲಾಯಿತು.
2008 ರಿಂದ ಈವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಮಾದಕವಸ್ತುಗಳ ಸಾಗಾಟ, ಮಾರಾಟ ಹಾಗೂ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡ ಕೋಟ್ಯಾಂತರ ರೂ ಮೌಲ್ಯದ ಮಾದಕ ವಸ್ತುಗಳನ್ನು ಇಂದು ನಾಶ ಪಡಿಸಲಾಯಿತು.
2008 ರಿಂದ ಈ ವರೆಗೆ ಪೊಲೀಸರು ಒಟ್ಟು 1,00,28,600 ರೂ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪೈಕಿ 30,13,100 ರೂ ಮೌಲ್ಯದ 103 ಕೆ.ಜಿ304 ಗ್ರಾಂ ಗಾಂಜಾ,9,82,500 ರೂ ಮೌಲ್ಯದ 101 ಗ್ರಾಂ ಹೈಡ್ರೋವೀಡ್ ಗಾಂಜಾ, 30,33,000 ರೂ ಮೌಲ್ಯದ 919 ಎಂಡಿಎಂಎ ಮಾತ್ರೆಗಳು, 30,00,000 ರೂ ಮೌಲ್ಯದ 990 ಎಲ್ ಎಸ್ ಡಿ ಸ್ಟ್ರಿಪ್ಸ್ ಗಳನ್ನು ಇಂದು ನಾಶ ಪಡಿಸಲಾಯಿತು.
ಇನ್ನು 2008 ರಿಂದ ಈ ವರೆಗೆ ಕಾಪು ಪೊಲೀಸ್ ಠಾಣೆ 5 ಪ್ರಕರಣ, ಪಡುಬಿದ್ರಿ ಠಾಣೆ 2, ಶಿರ್ವ ಠಾಣೆ 1, ಮಣಿಪಾಲ ಠಾಣೆ 12, ಉಡುಪಿ ನಗರ ಠಾಣೆ 10, ಮಲ್ಪೆ ಠಾಣೆ 2, ಸೆನ್ ಠಾಣೆ 8, ಕುಂದಾಪುರ ಠಾಣೆ 6, ಕುಂದಾಪುರ ನಗರ ಠಾಣೆ 2,ಗಂಗೊಳ್ಳಿ ಠಾಣೆ 1, ಹಿರಿಯಡ್ಕ ಠಾಣೆ 1 ಸೇರಿ ಒಟ್ಟು 50 ಪ್ರಕರಣಗಳು ದಾಖಲಾಗಿದೆ.