ಜೂ.28ರ ಬಳಿಕ ಹೋಟೆಲ್, ರೆಸಾರ್ಟ್, ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆಸಲು ಅನುಮತಿ
ಬೆಂಗಳೂರು: ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಜೂನ್ 28ರ ಬಳಿಕ ಮದುವೆ ಹಾಲ್, ಹೋಟೆಲ್, ರೆಸಾರ್ಟ್, ಕಲ್ಯಾಣ ಮಂಟಪ ಇತ್ಯಾದಿಗಳಲ್ಲಿ ಮದುವೆ ನಡೆಸಲು ಸರಕಾರ ಅನುಮತಿ ನೀಡಿದೆ. ಆದರೆ, ಮದುವೆಯಲ್ಲಿ ಭಾಗವಹಿಸುವವರ ಒಟ್ಟು ಸಂಖ್ಯೆ 40 ಮೀರುವಂತಿಲ್ಲ.
ಈ ಕುರಿತು ಸ್ಥಳೀಯಾಡಳಿತ ಸಂಸ್ಥೆ, ತಹಶೀಲ್ದಾರ್ ಮೊದಲಾದವರಿಂದ ವರ್ಗಾಯಿಸಲಾಗದ ಪಾಸ್ ಪಡೆದುಕೊಳ್ಳಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶಿಸಿದ್ದಾರೆ. ರಾಜ್ಯವ್ಯಾಪಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಸರರ್ಕರ ಈ ಕ್ರಮ ಕೈಗೊಂಡಿದೆ.