ಮಸೀದಿ ಜಾಗ ಕಾನೂನುಬಾಹಿರವಾಗಿ ಹಿಂಪಡೆದು ಸೌಹಾರ್ದತೆ ಹಾಳು ಮಾಡುವ ಪ್ರಯತ್ನ- ಕಾಂಗ್ರೆಸ್
ಕೊಡವೂರು: ಕಲ್ಮತ್ ಮಸೀದಿಯ ಜಾಗವನ್ನು 2020ರಲ್ಲಿ ತಮ್ಮದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಸೀದಿಯ ಹೆಸರಿಗೆ ಗಜೆಟ್ ನೋಟಿಫಿಕೇಷನ್ ಮಾಡಿಸಿ ಈಗ ಸಂಘ ಪರಿವಾರದ ಒತ್ತಡಕ್ಕೆ ಮಣಿದು ಅಕ್ರಮವಾಗಿ ಸರ್ಕಾರದ ವಶಕ್ಕೆ ಹಿಂಪಡೆದಿರುವ ಉಡುಪಿ ಶಾಸಕ ರಘುಪತಿ ಭಟ್ ಈ ಗಜೆಟ್ ನೋಟಿಫಿಕೇಷನ್ 2018 ರಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾರೆ.
ಮಸೀದಿ ಹೆಸರಿಗೆ ಆಗಿರುವ ಜಾಗವನ್ನು ಏಕಾಏಕಿ ಕಾನೂನುಬಾಹಿರವಾಗಿ ಹಿಂಪಡೆದು ಜಿಲ್ಲೆಯಲ್ಲಿ ಸಮುದಾಯಗಳ ನಡುವೆ ಗೊಂದಲ ಉಂಟು ಮಾಡುವ ಮೂಲಕ ಜಿಲ್ಲೆಯ ಸೌಹಾರ್ದತೆ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಕಾನೂನಿನ ಪ್ರಕಾರವಾಗಿ ಗಜೆಟ್ ನೋಟಿಫಿಕೇಷನ್ ಮೂಲಕ ಯಾವುದೇ ಸಮುದಾಯಕ್ಕೆ ಮಂಜೂರು ಮಾಡಿರುವ ಜಾಗವನ್ನು ಸಕಾರಣ ವಿಲ್ಲದೆ ಹಿಂಪಡೆಯುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.