ಒಂದು ಸಮುದಾಯವನ್ನು ಮೆಚ್ಚಿಸಲು ಶಾಸಕರಿಂದ ಇನ್ನೊಂದು ಸಮುದಾಯಕ್ಕೆ ಅನ್ಯಾಯ- ಅಮೃತ್ ಶೆಣೈ
ಉಡುಪಿ ಜೂ.25(ಉಡುಪಿ ಟೈಮ್ಸ್ ವರದಿ): ಉಡುಪಿ ಶಾಸಕರು ಒಂದು ಸಮುದಾಯವನ್ನು ಮೆಚ್ಚಿಸಲು ಹೋಗಿ ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಸಾಮಾನ್ಯ ಜನರ ಆರ್ ಟಿಸಿ ಬದಲಾವಣೆ ಮಾಡಬೇಕಾದರೆ ಕಂದಾಯ ಇಲಾಖೆ ವರ್ಷಾನುಗಟ್ಟಲೆ ಅಲೆದಾಡಿಸುತ್ತದೆ. ಆದರೆ ಕೊಡವೂರು ಕಲ್ಮತ್ ಮಸೀದಿಯ ಪ್ರಕರಣದಲ್ಲಿ ಬಲವಂತವಾಗಿ ಮತ್ತು ತರಾತುರಿಯಲ್ಲಿ ಆರ್ ಟಿಸಿ ಬದಲಾಯಿಸಿದ್ದಾರೆ. ಈ ಮೂಲಕ ಒಂದು ಸಮುದಾಯವನ್ನು ಮೆಚ್ಚಿಸಲು ಶಾಸಕರು ಇನ್ನೊಂದು ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆಂದು ಹೇಳಿದ್ದಾರೆ.
ಈ ಜಾಗಕ್ಕೆ ವಕ್ಫ್ ನೋಟಿಫಿಕೇಷನ್ ಮಾಡಿದ್ದು ಬಿಜೆಪಿ ಸರಕಾರ. ಈ ನೋಟಿಫಿಕೇಷನ್ ಮಾಡುವ ಸಂದರ್ಭದಲ್ಲಿ ಎಲ್ಲಾ ಕಾನೂನಾತ್ಮಕ ಪ್ರಕ್ರಿಯೆಯನ್ನು ಅನುಸರಿಸಲಾಗಿದೆ. ಏಕಾಏಕಿ ಬದಲಾವಣೆ ಮಾಡಿರುವುದು ಖಂಡನೀಯ.ಇದು ಸಮುದಾಯಗಳ ನಡುವೆ ಬಿರುಕು ತರುವ ಪ್ರಯತ್ನವೆಂದು ಹೇಳಿದ್ದಾರೆ. ಈ ರೀತಿಯ ಅನ್ಯಾಯವನ್ನು ಖಂಡಿತವಾಗಿಯೂ ಪ್ರಜ್ಞಾವಂತ ನಾಗರಿಕರು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಲಾಗುವುದೆಂದು ತಿಳಿಸಿದ್ದಾರೆ.