ಉಡುಪಿ: ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ-ಹಿರಿಯರಿಗೆ ಗೌರವಾರ್ಪಣೆ

ಉಡುಪಿ: ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ “ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ” ಪ್ರಯುಕ್ತ  ತುರ್ತು ಪರಿಸ್ಥಿತಿ ಸಮಯದಲ್ಲಿ ಜೈಲುವಾಸ ಅನುಭವಿಸಿದ ಉಡುಪಿ ನಗರ ಭಾಗದ ಹಿರಿಯರಿಗೆ ಗೌರವಾರ್ಪಣೆ ಸಲುವಾಗಿ ಪಕ್ಷದ ಹಿರಿಯರು ಮತ್ತು ಮಾರ್ಗದರ್ಶಕರಾದ ಎಂ. ಸೋಮಶೇಖರ್ ಭಟ್ ರವರಿಗೆ ಶಾಸಕ ಕೆ.ರಘುಪತಿ ಭಟ್ ರವರು ಗೌರವಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಸ್ಥಳೀಯ ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್ ಉಪಸ್ಥಿತರಿದ್ದರು.

ಗ್ರಾಮಾಂತರ ಬಿಜೆಪಿ ಆಶ್ರಯದಲ್ಲಿ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ ಪ್ರಯುಕ್ತ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 14 ದಿನ ಸೆರೆವಾಸ ಅನುಭವಿಸಿದ್ದ ಉಡುಪಿ ಗ್ರಾಮಾಂತರ ಭಾಗದ ಹಿರಿಯರಿಗೆ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಹಿರಿಯರು ಹಾಗೂ ಮಾರ್ಗದರ್ಶಕರಾದ  ನೀಲಾವರ ನಾಗೇಶ್ ಪೈ ಮತ್ತು ಸುಂಕೇರಿ ವೆಂಕಟ್ರಾಯ ನಾಯಕ್ ಅವರಿಗೆ ಅವರ ನಿವಾಸಕ್ಕೇ ತೆರಳಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಉಡುಪಿ ಗ್ರಾಮಾಂತರ ಅಧ್ಯಕ್ಷರಾದ ವೀಣಾ ವಿ. ನಾಯ್ಕ್, ಎಸ್.ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಉಮೇಶ್ ಎ. ನಾಯ್ಕ್ ಚೇರ್ಕಾಡಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಹಾಗೂ ಪಕ್ಷದ ಪ್ರಮುಖರಾದ ರಘುಪತಿ ಬ್ರಹ್ಮಾವರ, ರಾಯಪ್ಪ ಪೈ, ಶ್ರೀನಿವಾಸ ನಾಯಕ್, ಸಚಿನ್ ಪೂಜಾರಿ, ಸುಂದರ ಪೂಜಾರಿ, CA ಗಿರೀಶ್ ಪೈ, ರಮ್ಯ ಉಪ್ಪೂರು, ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಸಂತಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!