5ಜಿ ಜಿಯೋ ಫೋನ್ ನೆಕ್ಸ್ಟ್ ಸೆಪ್ಟೆಂಬರ್ ನಲ್ಲಿ ಬಿಡುಗಡೆ

ಮುಂಬೈ: ಗೂಗಲ್ ಹಾಗೂ ಜಿಯೋ ಸಹಯೋಗದಲ್ಲಿ ಅಭಿವೃದ್ಧಿಯಾಗಿರುವ ಜಿಯೋಫೋನ್ ನೆಕ್ಸ್ಟ್-5 ಜಿ ಸ್ಮಾರ್ಟ್ ಫೋನ್ ಸೆಪ್ಟೆಂಬರ್ ನಲ್ಲಿ ಬಿಡುಗಯಾಗಲಿದೆ ಎಂದೌ ರಿಲಾಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಜೂ.24 ರಂದು ಘೋಷಿಸಿದ್ದಾರೆ. 

ಜಿಯೋಫೋನ್ ನೆಕ್ಸ್ಟ್ ಸೆ.10 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿರಲಿದ್ದು ಜಗತ್ತಿನಲ್ಲಿಯೇ ಕೈಗೆಟುಕುವ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಅಂಬಾನಿ ಆರ್ ಐಎಲ್ ನ ವಾರ್ಷಿಕ ಸಭೆಯಲ್ಲಿ ಅಂಬಾನಿ ಹೇಳಿದ್ದಾರೆ.

ಧ್ವನಿ ಸಹಾಯಕ ಜಾಗೂ ಭಾಷಾಂತರ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಸ್ಮಾರ್ಟ್ ಫೋನ್ ಹೊಂದಿರಲಿದ್ದು, ರಿಲಾಯನ್ಸ್ ಜಿಯೋ 5 ಜಿ ಗಾಗಿ ಗೂಗಲ್ ಕ್ಲೌಡ್ ನ್ನು ಬಳಕೆ ಮಾಡಲಿದೆ ಎಂದು ಅಂಬಾನಿ ಹೇಳಿದ್ದಾರೆ. ಕಳೆದ ವರ್ಷ ರಿಲಾಯನ್ಸ್ ನಲ್ಲಿ ಶೇ.7.7 ರಷ್ಟು ಪಾಲನ್ನು ಹೊಂದಲು 33,737 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವುದಾಗಿ ಹೇಳಿತ್ತು. 

Leave a Reply

Your email address will not be published. Required fields are marked *

error: Content is protected !!